ವಿಜಯಸಾಕ್ಷಿ ಸುದ್ದು, ಗದಗ: ಇಲ್ಲಿನ ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸರ್ಕಾರದ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಹಾತ್ವಾಂಕಾಕ್ಷಿ ಯೋಜನೆಯಾದ `ನಮ್ಮ ಶಾಲೆ-ನಮ್ಮ ಜವಾಬ್ದಾರಿ’ ಕಾರ್ಯಕ್ರಮದಲ್ಲಿ ಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಸ್ಪೂರ್ತಿ ನಿಂಗಪ್ಪ ಉಡಚಗೊಂಡ, ಲಕ್ಷ್ಮೀ ಅಶೋಕ ನಲೂಡಿ, ಕೀರ್ತಿ ಶೇಖಪ್ಪ ನಾಯ್ಕರ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ ಸಿ.ಇ.ಓ. ಭರತ್ ಎಸ್, ಡಿಡಿಪಿಐ ಆರ್.ಎಸ್. ಬುರಡಿ, ಡಾ. ಬಸವರಾಜ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವ್ಹಿ. ಶೆಟ್ಟೆಪ್ಪನವರ, ನಗರಸಭೆ ಸದಸ್ಯೆ ವಿದ್ಯಾ ಗಡಗಿ, ಎಸ್‌ಡಿಎಂಸಿ ಅಧ್ಯಕ್ಷರಾದ ನಂದಾ ಖಟವಟೆ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಾದ ಸರಸ್ವತಿ ಕನವಳ್ಳಿ, ರವಿಪ್ರಕಾಶ, ಎಂ.ಎಸ್. ಕಂಬಳಿ, ಶಿವಕುಮಾರ ಕುರಿ, ಅರವಟಗಿ, ಶಂಕರ ಹಡಗಲಿ, ಎಸ್.ಡಿ. ಪ್ರಭಯ್ಯನಮಠ, ಜೆ.ಬಿ. ಅಣ್ಣಿಗೇರಿ, ಬಿ.ಎಸ್. ಯರಗುಡಿ ಮುಂತಾದವರು ಉಪಸ್ಥಿತರಿದ್ದರು.


