ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾದ ಆರ್.ಜಿ. ಕಲ್ಲೂರ ಹಾಗೂ ಪದಾಧಿಕಾರಿಗಳಿಗೆ ಗದಗ ನಗರದಲ್ಲಿರುವ ಸಿದ್ಧಶ್ರೀ ಸೊಸೈಟಿಯ ವತಿಯಿಂದ ಸನ್ಮಾನಿಸಲಾಯಿತು.
ಸಿದ್ಧಶ್ರೀ ಸೊಸೈಟಿಯ ಅಧ್ಯಕ್ಷರಾದ ಕೆ.ಎಸ್. ಜಂಗಳಿಯವರು ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, ಸಾಮಾಜಿಕ ನ್ಯಾಯ ಹಾಗೂ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲಾ ಪದಾಧಿಕಾರಿಗಳು ಸತ್ಯ, ನಿಷ್ಠೆ, ಕಾಯಕದಲ್ಲಿ ನಿರತರಾಗಿ ಬಡವರ ಸೇವೆ ಮಾಡಲು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತಾಗಲಿ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ಎಮ್.ಎ. ಸಂಗನಾಳ, ಕಾರ್ಯದರ್ಶಿ ಎಮ್.ಎ. ನಾಯ್ಕರ, ಖಜಾಂಚಿ ಶೈಲಾ ಹಿರೇಮಠ ಹಾಗೂ ಜಂಟಿ ಕಾರ್ಯದರ್ಶಿ ಸಿ.ಎನ್. ಗೂಳರಡ್ಡಿಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ಧಶ್ರೀ ಸೊಸೈಟಿಯ ಉಪಾಧ್ಯಕ್ಷ ಜೆ.ಎಸ್. ಗುಡಗೇರಿ, ನಿರ್ದೇಶಕರಾದ ಪಿ.ವಿ. ಮರಗಿ, ಎಸ್.ಟಿ. ಸತ್ಯಪ್ಪನವರ, ಗುರು ತಿರ್ಲಾಪೂರ, ಪಿ.ಎನ್. ಗುಗ್ಗರಿ, ಎನ್.ವಾಯ್. ಸಾಲಿ, ಕೆ.ಎನ್. ಪಾಟೀಲ, ಗಂಗಾಧರ ಉಳ್ಳಿಕಾಶಿ. ಬಿ.ಡಿ. ಹೂವಣ್ಣವರ, ಎಸ್.ಬಿ. ಪಾಟೀಲ, ವಿ.ಈ. ಅರಮನಿ, ಎಸ್.ಎಸ್. ಗುಡಗೇರಿ ಹಾಗೂ ಸಿಬ್ಬಂದಿಯವರು ಪದಾಧಿಕಾರಿಗಳಿಗೆ ಶುಭ ಹಾರೈಸಿದರು.