ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಿಜಯನಗರ ಬಡಾವಣೆಯಲ್ಲಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಗದಗ ಜಿಲ್ಲಾ ವಿಶ್ವಕರ್ಮ ಮಹಾ ಒಕ್ಕೂಟದ ನೂತನ ಅಧ್ಯಕ್ಷ ನಾಗರಾಜ ದೇ.ಕಮ್ಮಾರ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ಅನ್ನಪೂರ್ಣ ಬಡಿಗೇರ ಇವರನ್ನು ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ.ಕಡ್ಲಿಕೊಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಸಿ.ವಿ. ಬಡಿಗೇರ, ಪ್ರಮುಖರಾದ ವಿಶ್ವನಾಥ ಯ.ಕಮ್ಮಾರ, ವಿಶ್ವಕರ್ಮ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೀರಣ್ಣ ಹಲವಾಗಲಿ, ಬೆಟಗೇರಿ ಶ್ರೀಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶ್ರೀಧರ ಕೊಣ್ಣೂರ, ಗದಗ ಜಿಲ್ಲಾ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಮೌನೇಶ ಸಿ.ಬಡಿಗೇರ(ನರೇಗಲ್ಲ), ಗದಗ ಜಿಲ್ಲಾ ವಿಶ್ವಕರ್ಮ ಯುವ ಪರೀಷತ್ ಅಧ್ಯಕ್ಷ ಮಹೇಶ ಕಮ್ಮಾರ, ಗೋಪಾಲ ಬಡಿಗೇರ, ಅಶೋಕ ಬಡಿಗೇರ, ಜಿ.ವಿ. ಬಡಿಗೇರ, ಕಿರಣ ಒಡ್ಡಟ್ಟಿ, ಪ್ರಕಾಶ ಬಡಿಗೇರ, ನಿಂಗರಾಜ ಬಡಿಗೇರ, ಮೌನೇಶ ಬಡಿಗೇರ(ಲಿಂಗದಾಳ), ಕುಮಾರ ಬಡಿಗೇರ, ವಿಶ್ವನಾಥ ಬಡಿಗೇರ, ಈರಣ್ಣಾ ಪತ್ತಾರ, ಮೌನೇಶ ಬಡಿಗೇರ, ಮೋಹನ ಪತ್ತಾರ, ಗೋವಿಂದಪ್ಪ ಬಡಿಗೇರ, ವಿದ್ಯಾಶ್ರೀ ದೇವೇಂದ್ರಪ್ಪ ಬಡಿಗೇರ ಮುಂತಾದವರು ಪಾಲ್ಗೊಂಡಿದ್ದರು.