ಮಡಿಕೇರಿ:- ʻಪ್ರವಾಸಿಗರಿಗೆ ಡೇಟಿಂಗ್ ಮಾಡಲು ಹುಡ್ಗೀರು, ಆಂಟಿಯರು ಲಭ್ಯವಿದ್ದಾರೆʼ ಎಂದು ಇನ್ಸ್ಟಾ ಪೋಸ್ಟ್ ಮಾಡಿದ್ದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
26 ವರ್ಷದ ನಾಗಪ್ಪ ಬಂಧಿತ ಆರೋಪಿ. ಕಿಡಿಗೇಡಿ, ಮಡಿಕೇರಿ ನಗರದ ವ್ಯಾಪ್ತಿಯಲ್ಲಿ ಆಂಟಿಯರು, ಹುಡುಗಿಯರು ಡೇಟಿಂಗ್‌ಗೆ ಸಿಕ್ತಾರೆ, ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಅಂತ ಮೊಬೈಲ್ ನಂಬರ್ ಕೂಡ ಹಾಕಿದ್ದ. ಇದರ ವಿರುದ್ಧ ಪ್ರವಾಸಿಗರು ಮಾತ್ರವಲ್ಲದೇ ಕೊಡಗಿನ ಸ್ಥಳೀಯರಿಂದಲೂ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಈ ಹಿಂದೆ ಪುಣೆಯಲ್ಲಿ ಹುಡುಗಿಯರು ಸಿಕ್ತಾರೆ ಅನ್ನೋ ಪೋಸ್ಟ್ ನಂಬಿ ನಾಗಪ್ಪ 4,000 ರೂ. ಹಣ ಕಳೆದುಕೊಂಡಿದ್ದ. ಹೀಗಾಗಿ ತಾನೂ ಕೂಡ ಏಕೆ ಮಹಿಳೆಯರ ಫೋಟೋಗಳನ್ನ ಹಾಕಿ ಹಣ ಮಾಡಬಾರದು ಅಂತ ಆಲೋಚನೆ ಮಾಡಿದ್ದ. ಹಲವಾರು ಕಡೆ ಇದೇ ರೀತಿ ಪೋಸ್ಟ್‌ಗಳನ್ನ ಹಾಕಿ 30 ರಿಂದ 40 ಸಾವಿರ ರೂ. ಸಂಪಾದನೆ ಮಾಡಿದ್ದಾನೆ ಎನ್ನಲಾಗಿದೆ.