ಭರವಸೆ ಮನುಷ್ಯನನ್ನು ಬದುಕಿಸುತ್ತದೆ: ರಂಭಾಪುರಿ ಶ್ರೀಗಳು

0
Spread the love

ವಿಜಯಸಾಕ್ಷಿ ಸುದ್ದಿ, ರಾಣೆಬೆನ್ನೂರು: ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖದ ಮೂಲ ಧರ್ಮ ಪರಿಪಾಲನೆಯಲ್ಲಿದೆ. ಭರವಸೆ ಮನುಷ್ಯನನ್ನು ಬೆಳೆಸಿ ಬದುಕಿಸುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಶನಿವಾರ ನಗರದ ಹಿರೇಮಠದಲ್ಲಿ ಜರುಗಿದ ಮನುಕುಲ ಸದ್ಭಾವನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಸುಂದರವಾಗಿ ಅಲಂಕಾರ ಮಾಡಿದ ಸುಳ್ಳಿಗಿಂತ ಹರಿದ ಬಟ್ಟೆಯ ಸತ್ಯವೇ ಹೆಚ್ಚು ಶಕ್ತಿಶಾಲಿ. ಕೈಗೆತ್ತಿಕೊಂಡ ಕೆಲಸವನ್ನು ಪೂರ್ಣ ಮನಸ್ಸಿನಿಂದ ನೆರವೇರಿಸುವುದು ಮುಖ್ಯ. ಬದುಕೆಂಬುದು ಕಷ್ಟ-ಸುಖ, ನೋವು-ನಲಿವುಗಳ ಸಂಮಿಶ್ರಣ. ನಮ್ಮ ಜೀವನದ ದೋಣಿಗೆ ನಾವೇ ನಾಯಕರು. ಮನುಷ್ಯ ಬದುಕಿರುವಾಗಲೇ ಸಾಯುವ ಹಾಗೆ ಮಾಡುವ ಎರಡು ಬಲವಾದ ಕಾರಣಗಳಿವೆ. ಒಂದು ಅವಮಾನವಾದರೆ ಇನ್ನೊಂದು ಅನುಮಾನ. ಸಂಪತ್ತು ಹೆಚ್ಚಿದಂತೆ ಸೌಜನ್ಯ ಗುಣ ಬೆಳೆಯಬೇಕು. ಸಜ್ಜನ ಸತ್ಪುರುಷರ ಸಂಗದಿAದ ಬೆಳೆದು ಬಂದಾಗ ಬದುಕು ಉಜ್ವಲಗೊಳ್ಳುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತö್ಯರಿಗೆ ಬೋಧ ಮಾಡುವಾಗ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ. ಹಿರೇಮಠದ ಶಿವಯೋಗಿ ಶಿವಾಚಾರ್ಯರು ಶನಿ ಕ್ಷೇತ್ರದಲ್ಲಿ ಭಕ್ತರ ಕಲ್ಯಾಣಕ್ಕಾಗಿ ಸದ್ಬಾವನಾ ಧರ್ಮ ಸಮಾರಂಭ ಸಂಯೋಜಿಸಿ ಮಾರ್ಗದರ್ಶನ ಸಂಸ್ಕಾರ ನೀಡುತ್ತಿರುವುದು ಸಂತೋಷ ತಂದಿದೆ ಎಂದರು.

‘ಮನುಕುಲ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ‘2023ಕ್ಕೆ  ದಾವಣಗೆರೆ ಉದ್ಯಮಿ ಪಿ. ಶಿವಕುಮಾರ ಹಾಗೂ ೨೦೨೪ನೇ ಸಾಲಿನ ಪ್ರಶಸ್ತಿಗೆ ಪಾತ್ರರಾದ ಖ್ಯಾತ ಚಲನಚಿತ್ರ ನಟ ದೊಡ್ಡಣ್ಣನವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು.

ಹಿರೇಮಠದ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ಭಾರತೀಯ ಉತ್ಕೃಷ್ಟ ಸಂಸ್ಕೃತಿಯನ್ನು ಬೆಳೆಸುವುದೇ ನಮ್ಮ ಗುರಿಯಾಗಿದೆ. ಈ ನಾಡಿದ ಧರ್ಮ ಬಂಧುಗಳ ಸಹಕಾರದಿಂದ ಬಹಳ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆದುಕೊಂಡು ಬಂದಿದೆ ಎಂದರು.

ಸಮಾರAಭದ ನಂತರ ಶನೇಶ್ವರ ಹಿರೇಮಠದಿಂದ ಕಾರ್ತೀಕ ದೀಪೋತ್ಸವ ಸಂಭ್ರಮದಿAದ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಧನ್ಯರಾದರು.


Spread the love

LEAVE A REPLY

Please enter your comment!
Please enter your name here