ಅಥಣಿ: ಅಥಣಿ ತಾಲೂಕಿನ ಯಂಕಚ್ಚಿ ಗ್ರಾಮದ ಬಳಿ ಕೂಲಿ ಕೆಲಸಕ್ಕಾಗಿ ಹೊರಟಿದ್ದ 32 ಜನ ಕೂಲಿ ಕಾರ್ಮಿಕರ ಸಾಗಿಸುತಿದ್ದ ಗೂಡ್ಸ ವಾಹನ ಪಲ್ಟಿಯಾದ ಘಟನೆ ನಡೆದಿದೆ.
Advertisement
ಅಥಣಿ ತಾಲೂಕಿನ ಯಂಕಚ್ಚಿ–ಯಲಿಹಡಗಲಿ ರಸ್ತೆ ಮಧ್ಯ ಮಾರ್ಗದಲ್ಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿಯಾಗಿದೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಿಂದ ಅಡಳ್ಳಿ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರು ವಾಹನದಲ್ಲಿದ್ದರು. ಈ ವೇಳೆ ವಾಹನದ ಟೈರ್ ಬ್ಲಾಸ್ಟ್ ಆಗಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಅಪಘಾತದಲ್ಲಿ ಸತ್ತಿ ಗ್ರಾಮದ ಮೂಲದ ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ತಕ್ಷಣವೇ 108 ಆಂಬುಲೆನ್ಸ್ ಸಿಬ್ಬಂದಿ ಆಗಮಿಸಿ ಗಾಯಾಳುಗಳನ್ನು ರಕ್ಷಿಸಿ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.