ಧಾರವಾಡ: ಬೈಕ್ ಗೆ ಲಾರಿ ಗುದ್ದಿದ ಪರಿಣಾಮ ಬೈಕ್ ನಲ್ಲಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದಿದೆ. ರೇಣವ್ವ ಕರಡಿಗುಡ್ಡ (65) ಸಾವನ್ನಪ್ಪಿದ ಮಹಿಳೆಯಾಗಿದ್ದು,
Advertisement
ಹುಬ್ಬಳ್ಳಿ ತಾಲೂಕಿನ ಹಾಳಕುಸುಗಲ್ ಗ್ರಾಮದ ಮಹಿಳೆಯಾಗಿದ್ದಾರೆ. ಬೈಕ್ ಮೇಲಿದ್ದ ಮಹಿಳೆಯ ಪತಿಗೆ ಕೂಡ ಗಾಯಗಳಾಗಿದ್ದು, ನವಲಗುಂದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.