ಭೀಕರ ಅಪಘಾತ: ಡಿವೈಡರ್’ಗೆ ಕಾರು ಡಿಕ್ಕಿ – ಇಬ್ಬರು ದುರ್ಮರಣ!

0
Spread the love

ಕೋಲಾರ: ನೂತನ ಚೆನೈ- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಡಿವೈಡರ್ ಗೆ ಕಾರ್ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಎಡಗಿನಬೆಲೆ ಟೋಲ್ ಬಳಿ ಜರುಗಿದೆ.

Advertisement

ಅಪಘಾತದ ರಭಸಕ್ಕೆ ಹುಂಡೈ ಕಾರು ಪುಡಿ-ಪಡಿಯಾಗಿದೆ. ಅಪಘಾತಕ್ಕೆ ಹೆದ್ದಾರಿಯಲ್ಲಿ ನಿರ್ಮಾಣ ಮಾಡಿರುವ ಅವೈಜ್ಞಾನಿಕ ಡಿವೈಡರ್ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಮೃತರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮೃತರು ಉತ್ತರ ಭಾರತ ಮೂಲದವರು ಎನ್ನಲಾಗಿದೆ. ಕಾರಿನಲ್ಲಿ ಗುಟ್ಕಾ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಮಾಲೂರು ಪೊಲೀಸರು ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here