ನೆಲಮಂಗಲ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಹೊರವಲಯದ ಮಾಕಳಿ ಬಳಿ ಕ್ಯಾಂಟರ್ ಲಾರಿ ಹರಿದು ಗೃಹಿಣಿಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
24 ವರ್ಷದ ಯಶೋಧ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಹೆಗ್ಗಡ ದೇವನಪುರದಿಂದ ಫಂಕ್ಷನ್ ಮುಗಿಸಿ ಅಂಚೆಪಾಳ್ಯ ಕಡೆ ಬೈಕ್ ನಲ್ಲಿ ದಂಪತಿ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಎಡಕ್ಕೆ ಬಂದ ಕ್ಯಾಂಟರ್ ಚಾಲಕ ಬೈಕ್ ಗೆ ಗುದ್ದಿದ್ದಾನೆ.
ಈ ವೇಳೆ ಮಹಿಳೆಯು, ಬೈಕ್ ನಿಂದ ಕೆಳಕ್ಕೆ ಬಿದ್ದಿದ್ದಾರೆ. ಆಗ ಯಶೋಧ ಮೇಲೆ ಲಾರಿ ಹರಿದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ಮಹಿಳೆ ಶವವನ್ನು ನೆಲಮಂಗಲ ಸರ್ಕಾರಿ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.