ಬಾಗಲಕೋಟೆ: ಬಾಗಲಕೋಟೆಯಲ್ಲಿ ಘೋರ ಘಟನೆಯೊಂದು ನಡೆದಿದ್ದು, ಅಂಗನವಾಡಿಗೆ ಹೋಗಿದ್ದ ಸಹೋದರನ ಮಗುವನ್ನ ಹತ್ಯೆ ಮಾಡಲಾಗಿರುವ ಘಟನೆ ಹುನಗುಂದ ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ ನಡೆದಿದೆ.
Advertisement
ಮಾರುತಿ ವಾಲಿಕಾರ(3) ಮೃತ ಮಗುವಾಗಿದ್ದು, ಅಂಗನವಾಡಿಗೆ ತೆರಳುತ್ತಿದ್ದ ವೇಳೆ ಮಾರುತಿಯ ಸಹೋದರ ಭೀಮಪ್ಪ ವಾಲಿಕಾರ ಅಲ್ಲಿಗೆ ತೆರಳಿ, ಅಂಗನವಾಡಿಯ ಹಿಂಭಾಗದಲ್ಲಿ ಮಗುವಿನ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.