ಶಿವಮೊಗ್ಗ: ಶಿವಮೊಗ್ಗದಲ್ಲಿ ಘೋರ ದುರಂತ ಸಂಭವಿಸಿದ್ದು, ಪಾಲಿಕೆ ನಿರ್ಮಿಸಿದ್ದ ಅವೈಜ್ಞಾನಿಕ ಹಂಪ್ಗೆ ಯುವಕ ಬಲಿಯಾದ ಘಟನೆ ಶಿವಮೊಗ್ಗದ ಎಲ್ಬಿಎಸ್ ನಗರದಲ್ಲಿ ಜರುಗಿದೆ. ಉಲ್ಲಾ (35)
ಮೃತ ದುರ್ಧೈವಿಯಾಗಿದ್ದು, ಎಲ್ಬಿಎಸ್ ನಗರ ಫ್ಲೈಓವರ್ ಸಮೀಪ ಹಂಪ್ ಗಮನಿಸದೆ ಬೈಕ್ನಿಂದ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬೈಕ್ ಸವಾರ ಹಂಪ್ ಕಾಣದೇ ನಿಯಂತ್ರಣ ತಪ್ಪಿ ಬಿದ್ದ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೃತ ಉಲ್ಲಾ ಶಿವಮೊಗ್ಗದ ‘ಸಂಗೀತಾ ಮೊಬೈಲ್ಸ್’ನಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.



