ಆಸ್ಪತ್ರೆಗೆ ದಾಖಲಾದ ಶೋಭಾ ಶೆಟ್ಟಿ: ಅಭಿಮಾನಿಗಳಿಗೆ ಸಂದೇಶ ನೀಡಿದ ನಟಿ

0
Spread the love

ಬಿಗ್ ಬಾಸ್ ಕನ್ನಡ 11 ಬರೋಬ್ಬರಿ 10 ನೇ ವಾರಕ್ಕೆ ಕಾಲಿಟ್ಟಿದೆ. 50ನೇ ದಿನಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟಿದ್ದ ಶೋಭಾ ಶೆಟ್ಟಿ ಬಂದ ಎರಡೇ ವಾರಕ್ಕೆ ಮನೆಯಿಂದ ಹೊಗ ಹೋಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಆಟವನ್ನು ಅರ್ಧಕ್ಕೆ ನಿಲ್ಲಿಸಿದ ಶೋಭಾ ಶೆಟ್ಟಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಲ್ಲಿಂದಲೇ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದಾರೆ.

Advertisement

ಸಿಕ್ಕ ಒಳ್ಳೆಯ ಅವಕಾಶವನ್ನು ಶೋಭಾ ಶೆಟ್ಟಿ ಕಳೆದುಕೊಂಡಿದ್ದಾರೆ. ಮನೆಯಿಂದ ಹೊರ ಬರುತ್ತಿದ್ದಂತೆ ಸೋಷಿಯಲ್ ಮೀಡಿಯಾ ಮೂಲಕ ತಾವು ಹೊರ ಬಂದಿರುವುದರ ಬಗ್ಗೆ ಮಾತನಾಡಿದ್ದರು. ಇದೀಗ ಆಸ್ಪತ್ರೆ ದಾಖಲಾಗಿರುವ ನಟಿ ಆಸ್ಪತ್ರೆ ಬೆಡ್ ನಿಂದಲೇ ಸಂದೇಶ ನೀಡಿದ್ದಾರೆ.

ಉತ್ತಮಗೊಳ್ಳುತ್ತಿದ್ದೇನೆ ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ನಿಮ್ಮ ಪ್ರೀತಿಗಾಗಿ ತುಂಬಾ ಧನ್ಯವಾದಗಳು ಎಂದು ಶೋಭಾ ಶೆಟ್ಟಿ ಹೇಳಿದ್ದಾರೆ. ಶೋಭಾ ಶೆಟ್ಟಿಗೆ ಆರೋಗ್ಯ ಕೈಕೊಟ್ಟಿದ್ದಕ್ಕೆ ವೀಕೆಂಡ್ ಶೋನಲ್ಲಿ ಸುದೀಪ್‌ಗೆ ಬಿಗ್ ಬಾಸ್ ಆಟ ಕ್ವೀಟ್ ಮಾಡೋದಾಗಿ ಹೇಳಿದರು. ಇದರಿಂದ ಶಿಶಿರ್ ಮತ್ತು ಐಶ್ವರ್ಯಾಗೆ ದೊಡ್ಮನೆ ಆಟ ಆಡಲು ಮತ್ತೊಂದು ಚಾನ್ಸ್ ಸಿಕ್ಕಿತ್ತು. ಫ್ಯಾನ್ಸ್ ವೋಟ್ ಮಾಡಿ ಉಳಿಸಿದರು ಕೂಡ ಆರೋಗ್ಯ ಸಾಥ್ ನೀಡುತ್ತಿಲ್ಲ. ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದರು.

ತೆಲುಗು ಬಿಗ್‌ಬಾಸ್‌ ನಲ್ಲಿ ಸಖತ್ ಸೌಂಡು ಮಾಡಿದ್ದ ಶೋಭಾ ಶೆಟ್ಟಿ ಕೊನೆಯವರೆಗೂ  ಪ್ರೀತಿ ಗಳಿಸಿ ಉಳಿದುಕೊಂಡಿದ್ದರು. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ತೆಲುಗಿನ ವೀಕ್ಷಕರ ಅಭಿರುಚಿ ಮತ್ತು ಕನ್ನಡ ವೀಕ್ಷಕರ ಅಭಿರುಚಿ ವಿಭಿನ್ನವಾಗಿದೆ ಎಂದು ಶೋಭಾ ಅವರ ಮನಸಿಗೆ ಅನಿಸಿತೋ ಗೊತ್ತಿಲ್ಲ ಆದರೆ ಅನಾರೋಗ್ಯದ ಕಾರಣವನ್ನು ನೀಡಿ, ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.


Spread the love

LEAVE A REPLY

Please enter your comment!
Please enter your name here