ವಾರ್ಡನ್‌ಗೆ ಹಾಸ್ಟೆಲ್ ವಿದ್ಯಾರ್ಥಿಗಳ ತರಾಟೆ: ಮೂಲಭೂತ ಸೌಕರ್ಯಕ್ಕೆ ಆಗ್ರಹ

0
Spread the love

ರಾಯಚೂರು:– ಮೂಲಭೂತ ಸೌಲಭ್ಯಗಳ ಕೊರತೆಗೆ ವಿದ್ಯಾರ್ಥಿಗಳ ಆಕ್ರೋಶ ಹೊರ ಹಾಕಿದ ಘಟನೆ ದೇವರಾಜ ಅರಸು ಮ್ಯಾಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಜರುಗಿದೆ.

Advertisement

ತಡರಾತ್ರಿ ವಾರ್ಡನ್ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿನಿಯರು ಸಿಡಿದೆದ್ದಿದ್ದು, ಬಾಲಕಿಯರು ವಾರ್ಡನ್ ಗೆ ಹಿಗ್ಗಾಮುಗ್ಗ ತರಾಟೆಗೆ ತಗೊಂಡಿದ್ದಾರೆ. ವಾರ್ಡನ್ ಗಿರಿಜಾ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು ತಡ ರಾತ್ರಿ ಪ್ರೊಟೆಸ್ಟ್ ನಡೆಸಲಾಗಿದ್ದು, ದೇವರಾಜ ಅರಸು ಮ್ಯಾಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಗೆ ವಿದ್ಯಾರ್ಥಿಗಳ ಆಕ್ರೋಶ ಹೊರ ಬಂದಿದೆ.

ಉಪ್ಪು ಇಲ್ಲದ ಸೊಪ್ಪಿನ ಊಟ, ತರಕಾರಿ ಇಲ್ಲದ ಸಾರು, 15 ದಿನಕ್ಕೆ ಒಮ್ಮೆ ಶೌಚಾಲಯ ಕ್ಲೀನ್, ಕಸ ಬಳಿಯೋಕೆ ಒಂದು ಬಾರಿ ಇಲ್ಲ, ಸೊಳ್ಳೆ ಬತ್ತಿ ಇಲ್ಲ, ಸೋಪು ಕಿಟ್ ಇಲ್ಲ ಬಳಸಕ್ಕೆ ನೀರಿಲ್ಲ ಕುಡಿಯೋಕೆ ನೀರಿಲ್ಲ ಸ್ನಾನ ಮಾಡದೆ ಕಾಲೇಜಿಗೆ ಹೋಗುತ್ತೇವೆ ಎಂದು ವಾರ್ಡನ್ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here