ಬೆಂಗಳೂರು: ಮನೆಗಳ್ಳತನ ಮಾಡ್ತಿದ್ದ ಆರೋಪಿಯನ್ನು ಬಂಡೇಪಾಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮೂರ್ತಿ(27) ಬಂಧಿತ ಆರೋಪಿಯಾಗಿದ್ದು, ಆರೋಪಿ ಕಳ್ಳತನಕ್ಕೆ ಕಷ್ಟವೇ ಪಡಲ್ಲ ಯಾಕಂದ್ರೆ ಶೂ, ಫ್ಲವರ್ ಪಾಟ್, ಹೊರಗಿನ ಕಿಟಕಿ ಮೇಲೆ ಹುಡುಕ್ತಾನೆ ಮನೆ ಕೀ ಸಿಕ್ಕರೆ ಬಾಗಿಲು ತೆರೆದು ಕಳ್ಳತನ ಮಾಡಿ ಎಸ್ಕೇಪ್ ಆಗ್ತಾನೆ.
Advertisement
ಇನ್ನೂ ಫೆಬ್ರವರಿ 28 ರಂದು ಬಂಡೇಪಾಳ್ಯದ ಅಣ್ಣಮ್ಮನ ಪಾಳ್ಯದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಿಳಿದಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 84 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.