ಚಾಮರಾಜನಗರ:- ಚಾಮರಾಜನಗರ ತಾಲೂಕಿನ ಮೂಕನಪಾಳ್ಯದಲ್ಲಿ ಕಾಡಾನೆ ದಾಳಿಗೆ ಮನೆಯೇ ಧ್ವಂಸವಾಗಿರುವ ಘಟನೆ ಜರುಗಿದೆ. ಮನೆ ಮಂದಿ ಮದುವೆಗೆ ತೆರಳಿ ವಾಪಸ್ ಆಗುವಷ್ಟರಲ್ಲಿ ಕಾಡಾನೆ ದಾಳಿಗೆ ಮನೆಯ ಛಾವಣಿಗಳು, ಮನೆಯ ಒಂದು ಪಾರ್ಶ್ವ ಧ್ವಂಸ ಆಗಿದೆ.
ತಡರಾತ್ರಿ ಕಾಡಾನೆ ಹಿಂಡು ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾಗೂ ಮನೆಗೆ ಹಾನಿ ಮಾಡಿದ್ದು, ರೈತ ಕುಟುಂಬ ಕಂಗಲಾಗಿದೆ. ಗ್ರಾಮದ ನಾನಕ್ ಭಾಯಿ ಅವರ ಜಮೀನಿಗೆ ನುಗ್ಗಿರುವ ಕಾಡಾನೆ ಹಿಂಡು ಟೊಮೆಟೊ, ಬೀನ್ಸ್ ಫಸಲನ್ನು ತುಳಿದು ತಿಂದು ನಾಶ ಮಾಡಿದೆ. ಜೊತೆಗೆ, 1 ಹಲಸಿನ ಮರ, 1 ಮಾವಿನಮರ, 8 ತೆಂಗಿನ ಸಸಿಗಳನ್ನು ಮುರಿದು ತುಳಿದು ಹಾಕಿದೆ.
ಘಟನೆಯಿಂದ ಮನೆ ಮಂದಿ ಕಂಗಾಲಾಗಿದ್ದು, ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.



