ಬೆಂಗಳೂರು:- ಹಗಲು ಹೊತ್ತಲ್ಲೇ ಮನೆ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಕಿಲಾಡಿ ಖದೀಮನನ್ನು ಮಹಾದೇವಪುರ ಪೊಲೀಸರು ಬಂಧಿಸಿದ್ದಾರೆ.
ಮಹಮದ್ ತಂಜೀಮ್ (33) ಬಂಧಿತ ಆರೋಪಿ. ಮೈಸೂರು ಮೂಲದವನಾದ ಬಂಧಿತ ಖದೀಮ, ಡ್ರೈಫ್ರೂಟ್ಸ್ ವ್ಯಾಪಾರ ಮಾಡಿಕೊಂಡು ಜೊತೆಗೆ ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮೈಸೂರು ಹಾಗೂ ಬೆಂಗಳೂರಿನಲ್ಲಿ ಕೈ ಚಳಕ ತೋರುತ್ತಿದ್ದ ಖದೀಮ, ಇದೀಗ ಪೊಲೀಸರ ಅತಿಥಿ ಆಗಿದ್ದಾನೆ.
ಬಂಧಿತನಿಂದ 29.40 ಲಕ್ಷ ಮೌಲ್ಯದ 245 ಗ್ರಾಂ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



