‘ಮನೆ ಮನೆ ಮತದಾನ’ ಕಾರ್ಯ ಆರಂಭ

0
mane manege
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಗದಗ ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ಮತದಾರರು ಹಾಗೂ ವಿಶೇಷಚೇತನ ಮತದಾರರ ಪೈಕಿ 12ಡಿ ಮುಖಾಂತರ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಮನೆಯಲ್ಲಿಯೇ ಮತದಾನ ಮಾಡುವ ಕಾರ್ಯಕ್ಕೆ ಶುಕ್ರವಾರ ಚಾಲನೆ ದೊರೆಯಿತು.

Advertisement

ನಗರದ ಹಲವು ವಾರ್ಡ್ ಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಭೇಟಿ ನೀಡಿ, ಮನೆ ಮನೆ ಮತದಾನದ ಕಾರ್ಯದ ಬಗ್ಗೆ ಪರಿಶೀಲಿಸಿದರು. ಈಗಾಗಲೇ ಅರ್ಜಿ ಸಲ್ಲಿಸಿರುವ ಮತದಾರರು, ತಾವು ನೀಡಿದ ವಿಳಾಸದ ಮನೆಯಲ್ಲಿಯೇ ಹಾಜರಿದ್ದು, ಮತ ಚಲಾಯಿಸುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಾಗರಿಕರು, ಮನೆ ಮನೆಯಲ್ಲಿಯೇ ಹಿರಿಯರಿಗೆ ಮತ ಚಲಾಯಿಸಲು ಅವಕಾಶ ಮಾಡಿರುವುದಕ್ಕೆ ಚುನಾವಣಾ ಆಯೋಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಮನೆಯಲ್ಲಿಯೇ ಮತ ಚಲಾಯಿಸಲು ಅವಕಾಶ ಮಾಡಿರುವುದರಿಂದ ಶೇಕಡವಾರು ಮತದಾನ ಹೆಚ್ಚಳ ಆಗುವುದರ ಜೊತೆಗೆ, ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಹಕಾರಿ ಆಗಲಿದೆ. ಆ ನಿಟ್ಟಿನಲ್ಲಿ ‘ಮನೆ ಮನೆ ಮತದಾನ’ ಹಿರಿಯರಿಗೆ ಮತ್ತು ವಿಶೇಷಚೇತನರಿಗೆ ಒಂದು ಅವಕಾಶ ಎಂದು ಹಿರಿಯ ನಾಗರಿಕರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಉಪ ವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ತಹಸೀಲ್ದಾರ ಶ್ರೀನಿವಾಸ ಕುಲಕರ್ಣಿ ಇತರರು ಇದ್ದರು.


Spread the love

LEAVE A REPLY

Please enter your comment!
Please enter your name here