ಧಾರವಾಡ: ಧಾರವಾಡದ ದುರ್ಗಾ ಕಾಲೋನಿಯಲ್ಲಿ ಸುರಿದ ಭಾರೀ ಮಳೆಗೆ ಮನೆಯ ಗೋಡೆಯೊಂದು ಕುಸಿದು ಬಿದ್ದಿದ್ದು, ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ.
Advertisement
ಘಟನೆ ಪರಿಣಾಮ ಮನೆಯಲ್ಲಿದ್ದ ಮಗು ಸೇರಿ ಏಳು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಕ್ಷ್ಮಣ ಗಾಳಿ ಎಂಬುವವರಿಗೆ ಸೇರಿದ ಮನೆಯ ಗೋಡೆಯೇ ಕುಸಿದು ಬಿದ್ದಿದೆ. ಇದೇ ಗೋಡೆ ಆ ಇಡೀ ಮನೆಗೆ ಆಸರೆಯಾಗಿತ್ತು. ಆದರೆ ಕಳೆದ ರಾತ್ರಿ ಮಳೆಗೆ ಇಡೀ ಗೋಡೆ ಕುಸಿದು ಬಿದ್ದಿದೆ.
ಪವಾಡ ಸದೃಶ್ಯ ರೀತಿಯಲ್ಲಿ ಮಗು ಸೇರಿ ಮನೆಯ ಏಳು ಜನ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.