ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಶುಕ್ರವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಇಲ್ಲಿಯ ಹತ್ತಾರು ಮಣ್ಣಿನ ಮನೆಗಳ ಗೋಡೆಗಳು ಕುಸಿದು ಲಕ್ಷಾಂತರ ರೂ ಹಾನಿಯಾಗಿದೆ.
Advertisement
ಬಜಾರ ರಸ್ತೆಯ ಮನೆಯ ಮುಂದೆ ಇಟ್ಟಿದ್ದ ಬೈಕ್ ಮೇಲೆ ಮಣ್ಣಿನ ಮನೆಯ ಗೋಡೆ ಬಿದ್ದು ಹಾನಿಗೊಳಗಾಗಿದೆ. ಗೊಲ್ಲರ ಓಣಿಯಲ್ಲಿ ನೇತ್ರಾವತಿ ಬೆಳ್ಳಿಗೌಡ್ರ ಎಂಬುವರ ಮನೆಯ ಸಂಪೂರ್ಣ ಮೇಲ್ಛಾವಣಿ ಹಾಗೂ ಗೋಡೆ ಕುಸಿದಿದೆ.
ಆರೋಪ: ಗೊಲ್ಲರ ಹಟ್ಟಿ ಯೋಜನೆಯಡಿಯಲ್ಲಿ ಮನೆ ನಿರ್ಮಾಣಕ್ಕೆ ನನ್ನ ಹೆಸರು ಆಯ್ಕೆಯಾದರೂ ಸಹ ಈವರೆಗೂ ಸಂಬಂಧಿಸಿದ ಅಧಿಕಾರಿಗಳು ಮನೆ ನಿರ್ಮಾಣದ ಆದೇಶಪತ್ರವನ್ನು ನೀಡಿಲ್ಲ. ಹೀಗಾಗಿ ನಮಗೆ ಮನೆಯಿಲ್ಲದೇ ಕೊರಗುವಂತಾಗಿದೆ ಎಂದು ನೇತ್ರಾವತಿ ಬೆಳ್ಳಿಗೌಡ್ರ ಆರೋಪಿಸಿದ್ದಾರೆ.