ನೈಟ್ ಔಟ್ ಬಾ ಎಂದು ಒತ್ತಡ: ಅಶ್ಲೀಲ ಮೆಸೇಜ್ ಗೆ ಮನನೊಂದು ಗೃಹಿಣಿ ಸೂಸೈಡ್!

0
Spread the love

ಬೆಂಗಳೂರು ಗ್ರಾಮಾಂತರ:- ರಾಜಧಾನಿ ಬೆಂಗಳೂರಿನ ಸಿಡೇದಹಳ್ಳಿಯಲ್ಲಿ ಅಶ್ಲೀಲ ಮೆಸೇಜ್​ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

Advertisement

ಮಮತಾ(31) ನೇಣಿಗೆ ಶರಣಾದ ರ್ದುದೈವಿ. ಶಾಲಾ ಸಹಪಾಠಿಗಳಾದ ವಡ್ಡರಹಳ್ಳಿಯ ನಿವಾಸಿ ಅಶೋಕ್‌ ಹಾಗೂ ಜೆ.ಪಿ.ನಗರದ ಗಣೇಶ್‌ ಎಂಬುವವರು ಅಶ್ಲೀಲ ಸಂದೇಶ ಕಳಿಸಿ ನಮ್ಮ ಜೊತೆ ಸಹಕರಿಸು ಎಂದು ಕಿರುಕುಳ ನೀಡಿದ್ದಾರಂತೆ. ಜೊತೆಗೆ ನೈಟ್ ಔಟ್ ಬರುವಂತೆ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಲಾಗಿದೆ.

ನಿನ್ನ ಬಿಡುವುದಿಲ್ಲ, ನಿನ್ನ ಸಂಸಾರ ಹಾಳು ಮಾಡುತ್ತೇವೆಂದು ಬೆದರಿಕೆ ಒಡ್ಡಿದ್ದರಂತೆ. ಇದರಿಂದ ಮನನೊಂದು ಗೃಹಿಣಿ ಮಮತಾ ತನ್ನ ನಿವಾಸದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಲೋಕೇಶ್, ಪತ್ನಿ ಮಮತಾಗೆ ಫೋನ್‌ ಮಾಡಿದಾಗ ರಿಸೀವ್‌ ಮಾಡದ ಹಿನ್ನೆಲೆ ಮನೆ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಅಶೋಕ್‌ ಮತ್ತು ಗಣೇಶ್‌ ವಿರುದ್ಧ ಲೋಕೇಶ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here