ಗೃಹಿಣಿಯರೇ, ಆಲೂಗಡ್ಡೆ ಮೊಳಕೆಯೊಡೆಯದಂತೆ ನೋಡಿಕೊಳ್ಳೋದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ!

0
Spread the love

ಎಲ್ಲರ ಮನೆಯ ಅಡುಗೆಮನೆಯಲ್ಲೂ ಸ್ಥಾನ ಪಡೆಯುವ ತರಕಾರಿ ಒಂದಿದ್ದರೆ ಅದು ಆಲೂಗಡ್ಡೆ. ಏನೂ ಇಲ್ಲದೇ ಇದ್ದರೂ, ಕೊನೆಗೆ ರುಚಿಕರವಾಗಿ ಆಲೂಗಡ್ಡೆ ಪಲ್ಯ ಮಾಡಿದರೂ ಒಂದೊತ್ತಿನ ಊಟ ನೆಮ್ಮದಿಯಿಂದ ಆಗುತ್ತದೆ.

Advertisement

ಆದರೆ, ಆಲೂಗಡ್ಡೆ ಮೊಳಕೆ ಒಡೆದಾಗ ಎಂದಿನ ಟೇಸ್ಟ್‌ ಇರೋದಿಲ್ಲ. ಅದನ್ನು ಹಾಗೇ ಬಿಟ್ಟರೆ ಕೊಳೆತು ಹೋಗುತ್ತದೆ. ಆದರೆ, ಆಲೂಗಡ್ಡೆ ಮೊಳಕೆಯೊಡೆಯದೇ ತಾಜಾವಾಗಿ ಹಲವು ದಿನಗಳ ಕಾಲ ಶೇಖರಿಸಿಡುವ ವಿಧಾನ ಇಲ್ಲಿದೆ.

ಆಲೂಗಡ್ಡೆಯಿಲ್ಲದ ಅಡುಗೆ ಮನೆ ಇಲ್ಲ ಎಂದೇ ಹೇಳಬಹುದು. ಅನೇಕ ಮನೆಗಳಲ್ಲಿ ಆಲೂಗಡ್ಡೆ ಇಲ್ಲದೇ ದೈನಂದಿನ ಅಡುಗೆಯನ್ನು ಕಲ್ಪಿಸುವುದು ಕಷ್ಟ. ಇಂತಹ ಆಲೂಗಡ್ಡೆ ಮೇಲೆ ಕೆಲವೊಮ್ಮೆ ಮೊಳಗೆ ಬಂದಿರುವುದನ್ನು ನೀವು ಗಮನಿಸಿರಬಹುದು.

ಆಲೂಗಡ್ಡೆಯಲ್ಲಿ ಮೊಳಕೆಯೊಡೆಯುವುದನ್ನು ತಪ್ಪಿಸಲು ಅತ್ಯುತ್ತಮ ಮಾರ್ಗವೆಂದರೆ ಅವುಗಳನ್ನು ದಾಸ್ತಾನು ಮಾಡುವುದನ್ನು ತಪ್ಪಿಸುವುದು. ಹೀಗಾಗಿ ಅವಶ್ಯಕತೆಗಳಿಗೆ ಅನುಗುಣವಾಗಿ ಖರೀದಿಸುವುದು ಉತ್ತಮ.

ಆಲೂಗಡ್ಡೆಗಳನ್ನು ತಂಪಾದ, ಗಾಢವಾದ ಮತ್ತು ಚೆನ್ನಾಗಿ ಗಾಳಿ ಇರುವ ಜಾಗದಲ್ಲಿ ಶೇಖರಿಸಿಡಬೇಕು. ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದನ್ನು ತಪ್ಪಿಸಿ. ತಂಪಾದ ವಾತಾವರಣವು ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ, ಇದರಿಂದ ರುಚಿಯನ್ನು ಬದಲಾಗುತ್ತದೆ.

ಹೆಚ್ಚುವರಿ ತೇವಾಂಶವು ಮೊಳಕೆಯೊಡೆಯಲು ಕಾರಣವಾಗುತ್ತದೆ. ಹೀಗಾಗಿ ಮುಚ್ಚಿದ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಕಾಗದದ ಚೀಲ, ಗೋಣಿ ಚೀಲ ಹಾಗೂ ಬುಟ್ಟಿಯಂತಹ ಗಾಳಿಯಾಡುವ ಕಂಟೇನರ್‌ನಲ್ಲಿ ಆಲೂಗಡ್ಡೆ ಸಂಗ್ರಹಿಸಿಡುವುದು ಒಳ್ಳೆಯದು.

ಆಲೂಗಡ್ಡೆಯನ್ನು ಈರುಳ್ಳಿ ಅಥವಾ ಬಾಳೆಹಣ್ಣಿನೊಂದಿಗೆ ಶೇಖರಿಸಬೇಡಿ. ಇವುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ, ಇದರಿಂದ ಆಲೂಗಡ್ಡೆ ವೇಗವಾಗಿ ಮೊಳಕೆಯೊಡೆಯುತ್ತವೆ.

ಕಪ್ಪಾದ ಕಲೆಯಿರುವ ಹಾಗೂ ಹಾಳಾದ ಆಲೂಗಡ್ಡೆಯನ್ನು ಖರೀದಿಸಬೇಡಿ. ಮಾರುಕಟ್ಟೆಯಿಂದ ತಂದ ಈ ತರಕಾರಿಯನ್ನು ತಂಪಾದ, ಶುಷ್ಕ ಮತ್ತು ಡಾರ್ಕ್ ಆದ ಸ್ಥಳದಲ್ಲಿ ಸಂಗ್ರಹಿಸಬೇಕು.

ಆಲೂಗಡ್ಡೆಗಳನ್ನು ಸೂರ್ಯನ ಬೆಳಕಿನಿಂದ ಸಾಧ್ಯವಾದಷ್ಟು ದೂರವಿಡುವುದು ಒಳ್ಳೆಯದು. ಹೆಚ್ಚಿನ ಬೆಳಕು ಹಸಿರೀಕರಣವನ್ನು ಪ್ರಚೋದಿಸಿ ಕ್ಲೋರೊಫಿಲ್ ಅನ್ನು ಉತ್ಪಾದಿಸುತ್ತದೆ. ಹಸಿರುಗೊಳಿಸುವಿಕೆಯು ಆಲೂಗಡ್ಡೆಯನ್ನು ಕಹಿಯಾಗಿಸುತ್ತದೆ, ಇದರಿಂದ ರುಚಿಯು ಬದಲಾಗುತ್ತದೆ.


Spread the love

LEAVE A REPLY

Please enter your comment!
Please enter your name here