ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತಿರುವ ನಟ ದರ್ಶನ್ ಸದ್ಯ ಜಾಮೀನು ಪಡೆದು ಹೊರ ಬಂದಿದ್ದಾರೆ. ಆರು ತಿಂಗಳಿಗೂ ಹೆಚ್ಚು ಸಮಯ ಜೈಲಿನಲ್ಲೇ ಕಳೆದ ದರ್ಶನ್ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜಾಮೀನು ಪಡೆದ ಬಳಿಕ ಇದೀಗ ಮೊದಲ ಭಾರಿಗೆ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಬೆನ್ನಲ್ಲೇ ಮೈಸೂರಿನ ಆಸ್ಪತ್ರೆಗೆ ಭೇಟಿ ನೀಡಿ ಬೆನ್ನು ನೋವಿಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಬೆನ್ನು ನೋವಿನ ಹಿನ್ನೆಲೆಯಲ್ಲಿ ನಟ ದರ್ಶನ್ ಮಂದ್ಯಂತರ ಜಾಮೀನು ಪಡೆದು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ನಟ ದರ್ಶನ್ ಭೇಟಿ ನೀಡಿದ್ದ ಬೆನ್ನು ನೋವಿಗೆ ಚಿಕಿತ್ಸೆ ಪಡೆದಿದ್ದಾರೆ. ಈ ವೇಳೆ ದರ್ಶನ್ ಜೊತೆ ಧನ್ವೀರ್ ಕೂಡ ಆಗಮಿಸಿದ್ದರು. ದರ್ಶನ್ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ವೈದ್ಯ ಡಾ.ಅಜಯ್ ಹೆಗ್ಡೆ ಅವರು ದರ್ಶನ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ್ದ ದರ್ಶನ್ಗೆ ಎಪಿಡ್ಯೂರಲ್ ಇಂಜೆಕ್ಷನ್ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ. ಇನ್ನೂ ಒಂದು ವಾರ ದರ್ಶನ್ ಅವರನ್ನು ವೈದ್ಯಕೀಯ ನಿಗಾವಣೆಯಲ್ಲಿ ಇಟ್ಟಿರುವುದಾಗಿ ಹೇಳಿರುವ ವೈದ್ಯರು. ಒಂದು ವಾರದಲ್ಲಿ ಬ್ಲಾಕ್ ಕ್ಲಿಯರ್ ಆಗದೇ ಇದ್ದಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಹೇಳಿದ್ದಾರೆ.
ಪಿಸಿಯೋ ಥೆರಪಿಯನ್ನು ದರ್ಶನ್ ಮಾಡಿಸಿಕೊಳ್ಳುತ್ತಿದ್ದು, ಅದರಿಂದ ಬೆನ್ನು ನೋವು ಸ್ವಲ್ಪ ಗುಣ ಆಗಿದೆ. 20 ದಿನದ ಹಿಂದೆ ಇದ್ದ ನೋವಿಗೂ ಈಗ ದರ್ಶನ್ಗೆ ಇರುವ ನೋವಿಗೂ ಬಹಳ ವ್ಯತ್ಯಾಸ ಇರುವುದಾಗಿ ದರ್ಶನ್ ಹೇಳಿಕೊಂಡಿದ್ದಾರಂತೆ. 20% ಗಿಂತ ಬೆನ್ನುನೋವಿನಲ್ಲಿ ಚೇತರಿಕೆ ಆಗಿದೆ. ಹಾಗಾಗಿ ಫಿಸಿಯೋ ಥೆರಪಿ ಮುಂದುವರೆಸುವಂತೆ ದರ್ಶನ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ಇಂದು ಎಪಿಡ್ಯೂರಲ್ ಇಂಜೆಕ್ಷನ್ ಕೊಡುವ ಮುನ್ನ ದರ್ಶನ್ ಗೆ ಇಂಜೆಕ್ಷನ್ ಇಂದ ಆಗಬಹುದಾದ ಸೈಡ್ ಎಫೆಕ್ಟ್ ವರ್ಕ್ ಆಗುವ ರೀತಿ ಎಲ್ಲವನ್ನು ವಿವವರಿಸಿದ್ದಾಗಿ ಹೇಳಿದ ವೈದ್ಯರು, ವಾರದ ಬಳಿಕ ನಡೆಯುವ ಪರೀಕ್ಷೆಯ ವರದಿಯಲ್ಲಿ ಅಪರೇಷನ್ ನಿಶ್ಚಿತವಾದರೆ ದರ್ಶನ್, ಪತ್ನಿ ವಿಜಯಲಕ್ಷ್ಮಿ, ದರ್ಶನ್ ಸಹೋದರ ದಿನಾಕರ್, ಮಗ ವಿನೀಶ್ ನಾಲ್ವರನ್ನು ಕರೆಸಿ ಅಪರೇಷನ್ ಬಗ್ಗೆ, ಅಪರೇಷನ್ ನಂತರ ಎಫೆಕ್ಟ್ ಬಗ್ಗೆ ಕೌನ್ಸಿಲಿಂಗ್ ರೂಪದಲ್ಲಿ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಒಂದು ವಾರದ ಬಳಿಕ ಕುಟುಂಬದ ಒಟ್ಟಿಗೆ ಆಸ್ಪತ್ರೆಗೆ ಬರುವುದಾಗಿ ದರ್ಶನ್ ಹೇಳಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.