ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸಬೇಕು. ಬಹುತೇಕ ಮಂದಿ ಬೆಳಗ್ಗೆ ಎದ್ದೇಳುತ್ತಿದ್ದಂತೆಯೇ ಬೆಡ್ ಕಾಫಿ ಅಥವಾ ಟೀ ಕುಡಿಯುವ ಮೂಲಕ ದಿನವನ್ನು ಆರಂಭಿಸುತ್ತಾರೆ. ಈ ಕೆಟ್ಟ ಅಭ್ಯಾಸವು ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಆದರೆ ಆರೋಗ್ಯಕ ಜೀವನಶೈಲಿಗಾಗಿ ಮೊದಲು ನೀವು ಬೆಳಗ್ಗೆ ಎದ್ದೇಳುತ್ತಿದ್ದಂತೆಯೇ ನೀರನ್ನು ಕುಡಿಯಬೇಕು.
ಚಳಿಗಾಲವಿರಲಿ, ಬೇಸಿಗೆ ಕಾಲ ಇರಲಿ ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರು ಕುಡಿದರೆ ಹೊಟ್ಟೆ ಮತ್ತು ದೇಹ ಎರಡು ಕೂಡ ಆರೋಗ್ಯಕರವಾಗಿರುತ್ತದೆ.
ಬೆಳಗ್ಗೆ ಹಲ್ಲುಜ್ಜುವ ಮೊದಲು ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಎಂದು ಆರೋಗ್ಯ ತಜ್ನರು ಹೇಳುತ್ತಾರೆ.
ಬೆಳಗ್ಗೆ 2 ಗ್ಲಾಸ್ ಉರುಗು ಬೆಚ್ಚಗಿನ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಅಪ್ಪಿತಪ್ಪಿಯೂ ಇದಕ್ಕಿಂತ ಹೆಚ್ಚು ನೀರು ಕುಡಿಯಬೇಡಿ. ಹಾಳುಬಾಯಿಯಲ್ಲಿ ನೀರನ್ನು ಕುಡಿಯುವುದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಹಾಳುಬಾಯಿಯಲ್ಲಿ ನೀರನ್ನು ಕುಡಿಯುವುದರಿಂದ ಬಾಯಿಯಲ್ಲಿರುವ ಲಾಲಾರಸವು ನೀರಿನೊಂದಿಗೆ ದೇಹಕ್ಕೆ ಹೋಗುತ್ತದೆ. ಇದು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ.
ಹಾಳುಬಾಯಿಯಲ್ಲಿ ನೀರನ್ನು ಕುಡಿಯುವುದು ಜೀರ್ಣಕ್ರಿಯೆಯನ್ನು ಬಲಪಡಿಸಲು ಮತ್ತು ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಕಾರಣದಿಂದ ರೋಗಗಳ ಅಪಾಯವು ಕಡಿಮೆಯಾಗುತ್ತದೆ.