ಭಾರತದಲ್ಲಿ ಪಲಾವ್ ಎಂದರೆ ಅಷ್ಟು ಫೇಮಸ್. ಪಲಾವ್ ತಯಾರಿಸುವಾಗ ಈ ಎಲೆಯನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಮತ್ತು ಬಳಸುವ ಮೊದಲು ಪಲಾವ್ ಎಲೆಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಲಾಗುತ್ತದೆ ಮತ್ತು ಇದರಿಂದಲೇ ತಯಾರಾಗುವ ಆಹಾರದ ರುಚಿ ಹೆಚ್ಚಾಗುತ್ತದೆ. ಇದರಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ಹೆಚ್ಚಾಗಿದೆ.
ಪಲಾವ್ ಎಲೆಗಳು ನಿಮ್ಮ ಆಹಾರವನ್ನು ರುಚಿಕರವನ್ನಾಗಿ ಮಾಡುತ್ತದೆ. ಇದಕ್ಕೆ ಕಾರಣ ಅದರಲ್ಲಿರುವ ಕೆಲವು ನಾಲಿಗೆಗೆ ಹಿತಕರ ಎನಿಸುವ ಗುಣ ಲಕ್ಷಣಗಳು. ನಿಮ್ಮ ಆಹಾರಕ್ಕೆ ಯಾವುದೇ ಸೋಡಿಯಂ ಅಂಶವನ್ನು ಸೇರಿಸದೆ ಆಹಾರದ ಸ್ವಾದವನ್ನು ಆಹಾ !!! ಎನ್ನುವಂತೆ ಹೆಚ್ಚಿಸುವ ಭಾರ ಪಲಾವ್ ಎಲೆಗೆ ಬಿಟ್ಟಿದ್ದು.
ಕೇವಲ ಅಡುಗೆಯಲ್ಲಿ ಮಾತ್ರ ಪಲಾವ್ ಎಲೆಗಳನ್ನು ಬಳಕೆ ಮಾಡುತ್ತಾರೆ ಎಂದು ತಿಳಿದುಕೊಳ್ಳುವುದು ತಪ್ಪು. ಸ್ನಾನ ಮಾಡುವಾಗ ಈ ಎಲೆಗಳನ್ನು ಪುಡಿ ಮಾಡಿ ನೀರಿನಲ್ಲಿ ಹಾಕಿ ಸ್ವಲ್ಪ ಹೊತ್ತು ಬಿಟ್ಟು ನಂತರ ಸ್ನಾನ ಮಾಡುತ್ತಾರೆ. ಚರ್ಮದ ಕ್ರೀಮ್ ಆಗಿ ಕೂಡ ಈ ಎಲೆಗಳನ್ನು ಉಪಯೋಗಿಸುತ್ತಾರೆ.
ಚರ್ಮ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಪಲಾವ್ ಎಲೆಗಳು ಇಲ್ಲವಾಗಿಸುತ್ತದೆ. ಕ್ಯಾನ್ಸರ್, ತಲೆ ಹೊಟ್ಟು, ಗ್ಯಾಸ್ಟ್ರಿಕ್, ಕೀಲು ನೋವು ಇತ್ಯಾದಿಗಳಿಗೆ ಈ ಎಲೆಗಳು ಔಷಧಿ ರೀತಿಯಲ್ಲಿ ಕೆಲಸ ಮಾಡುತ್ತವೆ ಎಂದು ಹೇಳಬಹುದು. ಮಧುಮೇಹ ಇರುವವರಿಗೂ ಕೂಡ ಪಲಾವ್ ಎಲೆಗಳು ಅವರ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಮತ್ತು ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡುತ್ತದೆ ಎಂದು ನಂಬಲಾಗಿದೆ.