ಹುಬ್ಬಳ್ಳಿ ಬಾಲಕಿ ದುರಂತ ಕೇಸ್:‌ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ ವಹಿಸಿ ಸರ್ಕಾರ ಆದೇಶ

0
Spread the love

ಬೆಂಗಳೂರು: ಹುಬ್ಬಳ್ಳಿಯಲ್ಲಿ ಕಂಡು ಕೇಳರಿಯದ ಘೋರ ದುರಂತ ನಡೆದಿದ್ದು, ಇಡೀ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. 5 ವರ್ಷದ ಬಾಲಕಿ ಮೇಲೆ ಅತ್ಯಾಚಾರದ ಯತ್ನ ನಡೆಸಿ ಕೊಲೆ ಮಾಡಿರೋ ಪ್ರಕರಣಕ್ಕೆ ಹುಬ್ಬಳ್ಳಿ ಕೆರಳಿ ಕೆಂಡವಾಗಿದೆ.

Advertisement

ಇನ್ನೂ ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿದೆ. ಇನ್ನೇರಡು ದಿನಗಳಲ್ಲಿ ಸಿಐಡಿ ತನಿಖೆ ಆರಂಭಿಸುವ ಸಾಧ್ಯತೆ ಇದೆ. ಇನ್ನು, ಪ್ರಕರಣದ ತನಿಖೆಗಾಗಿ ತಜ್ಞರ ತಂಡ ರಚಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್​ ಪಿಐಎಲ್ ಸಲ್ಲಿಸಿದೆ.

ಎನ್ಕೌಂಟರ್​ನಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ದೂರವಾಣಿ ಕರೆ ವಿವರ (ಸಿಡಿಆರ್) ಪರಿಶೀಲಿಸಬೇಕು. ವೈರ್​ಲೆಸ್ ಲಾಗ್ ಬುಕ್ ಪರಿಶೀಲನೆಗೆ ನಿರ್ದೇಶಿಸಲು ಮನವಿ ಮಾಡಿದೆ. ಮೃತನ ದೇಹದ ಅಂತ್ಯಕ್ರಿಯೆ ಮಾಡದಂತೆ ತಡೆಗೆ ಮತ್ತು ಸಾಕ್ಷ್ಯನಾಶ ಆಗದಂತೆ ಕ್ರಮಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿಕೊಂಡಿದೆ.


Spread the love

LEAVE A REPLY

Please enter your comment!
Please enter your name here