ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ತಮ್ಮ ಅಮೋಘ 32 ವರ್ಷಗಳ ಸಾರ್ಥಕ ನಿವೃತ್ತಿಯ ಸೇವೆಯೊಂದಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಹಾಗೂ ಶಾಲೆಗೆ ಕೊಡುಗೆ ನೀಡಿದ ಸುರೇಶ ಹುಬ್ಬಳ್ಳಿಯವರ ಕಾರ್ಯ ಪ್ರಶಂಸನೀಯ ಎಂದು ಡಿಡಿಪಿಐ ಆರ್.ಎಸ್. ಬುರಡಿ ಹೇಳಿದರು.
ಇಲ್ಲಿಯ ಸರಕಾರಿ ಮಾದರಿ ಪ್ರಾಥಮಿಕ ದ್ವಿಭಾಷಾ ಶಾಲೆಯ ಮುಖ್ಯೋಪಾಧ್ಯಾಯ ಸುರೇಶ ಹುಬ್ಬಳ್ಳಿ ಅವರು ನಿವೃತ್ತಿ ಹೊಂದಿದ ನಿಮಿತ್ತ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ತಮ್ಮ 32 ವರ್ಷಗಳ ಸೇವಾವಧಿಯಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕಾರವನ್ನು ಸಹ ಕಲಿಸಿದ್ದಾರೆ. ತಮ್ಮ ನಿವೃತ್ತಿ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪಿಯುಸಿ ಪ್ರಾಥಮಿಕ ಶಾಲೆಯ ಪ್ರತಿಭಾನ್ವಿತ 19 ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದರು.
ಸುರೇಶ ಹುಬ್ಬಳ್ಳಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಸೇವೆ ನೀಡಲು ಸಹಕಾರ ನೀಡಿದ ಇಲಾಖೆ ಮತ್ತು ಸಹ ಶಿಕ್ಷಕರಿಗೆ ಅಭಿನಂದನೆ ತಿಳಿಸಿದರು. ಸಾನ್ನಿಧ್ಯ ವಹಿಸಿದ್ದ ಅಲ್ಲಮಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ, ಯೋಜನಾ ಪೋಷಣಾಧಿಕಾರಿ ಶಂಕರ ಹಡಗಲಿ ಮಾತನಾಡಿದರು.
ಸುರೇಶ ಹುಬ್ಬಳ್ಳಿ ಹಾಗೂ ದಂಪತಿಗಳನ್ನು ಶಿಕ್ಷಣ ಇಲಾಖೆ, ಶಿಕ್ಷಕರ ಸಂಘ, ಗ್ರಾಮ ಪಂಚಾಯಿತಿ, ಗ್ರಾಮದ ಯುವಕ ಸಂಘಗಳು, ಸಹಪಾಠಿಗಳು, ಸ್ನೇಹಿತರು ಸನ್ಮಾನಿಸಿದರು.
ಪ್ರಾಥಮಿಕ, ಪ್ರೌಢಶಾಲೆ, ಪಿ.ಯು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಪ್ರವೇಶದ್ವಾರದ ನಾಮ ಫಲಕವನ್ನು ಅನಾವರಣಗೊಳಿಸಿದರು. ಗ್ರಾಮದ ಹಳೆ ವಿದ್ಯಾರ್ಥಿ, ಪ್ರೊಬೆಷನರಿ ಪಿಎಸ್‌ಐ ಅಂದಪ್ಪ ಬಳಿಗೇರ ತಮ್ಮ ಅನಿಸಿಕೆ ಹಂಚಿಕೊಂಡರು.
ಎಸ್‌ಡಿಎಂಸಿ ಅಧ್ಯಕ್ಷ ಗವಿಶಿದ್ದಪ್ಪ ಯಲಿಶಿರುಂದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಜಿ.ಪಂ ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಬ್ರಹ್ಮಕುಮಾರಿ ಸರೋಜಕ್ಕ, ವಿ.ಎಂ. ಹಿರೇಮಠ, ಎಸ್.ಆರ್. ಬಂಡಿ, ಡಿ.ಎಸ್. ತಳವಾರ, ಗ್ರಾ.ಪಂ ಸದಸ್ಯ ರುದ್ರಪ್ಪ ಮುಸ್ಕಿನಭಾವಿ, ಕುಬೇರಪ್ಪ ಬೆಂತೂರು, ಅನಸಮ್ಮ ಅಂಬಕ್ಕಿ, ಪಿಡಿಒ ಅಮೀರ ನಾಯಕ, ಎಸ್.ಸಿ. ಭಾವಿ, ಅಶೋಕ ಬೂದಿಹಾಳ, ಮಾಜಿ ಯೋಧ ಪಿ.ಎಸ್. ಗುಂಡಳ್ಳಿ ಮುಂತಾದವರಿದ್ದರು.
ರಂಜನಾ ಚಕ್ರಸಾಲಿ ಸಂಗಡಿಗರು ಪ್ರಾರ್ಥಿಸಿದರು. ಜೆ.ಪಿ. ಶೇಟ ಸ್ವಾಗತಿಸಿದರು. ಅಂಜನಾ ಕರಿಯಲ್ಲಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಜಿ. ಕುರವತ್ತಿಗೌಡ್ರ ನಿರೂಪಿಸಿದರು. ಎಂ.ಪಿ. ಹೊನ್ನಾಪೂರ ವಂದಿಸಿದರು.
ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಸುರೇಶ ಹುಬ್ಬಳ್ಳಿಯವರು ಶತಮಾನ ಕಂಡ ಈ ಶಾಲೆಯ ಪ್ರವೇಶ ದ್ವಾರದಲ್ಲಿ ಆಕರ್ಷಣೀಯವಾದ ನಾಮಫಲಕವನ್ನು ಅಂದಾಜು 85 ಸಾವಿರ ರೂ ವೆಚ್ಚದಲ್ಲಿ ಕೊಡುಗೆ ನೀಡಿದ್ದು ಸ್ಮರಣಿಯವಾಗಿದೆ. ಈ ಅಭಿನಂದನಾ ಕಾರ್ಯಕ್ರಮವು ಮುಂದೆ ನಿವೃತ್ತಿ ಹೊಂದುವ ಎಲ್ಲ ಶಿಕ್ಷಕರಿಗೆ ಮಾದರಿಯಾಗಿದೆ. ತಾವು ಮುಖ್ಯೋಪಾಧ್ಯಾಯರಾದ ನಂತರ ಆಂಗ್ಲ ಮಾಧ್ಯಮ ಶಾಲೆಯ ಬದಲಾವಣೆಯನ್ನು ಗ್ರಾಮದ ಗಣ್ಯರ, ಎಸ್‌ಡಿಎಂಸಿ ಅವರ ಸಹಕಾರದೊಂದಿಗೆ ನೆರವೇರಿಸಿದ್ದಾರೆ. ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.