ಹುಬ್ಬಳ್ಳಿ ಸಿಲಿಂಡರ್​ ಬ್ಲಾಸ್ಟ್ ಕೇಸ್: ಚಿಕಿತ್ಸೆ ಫಲಿಸದೇ ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು!

0
Spread the love

ಹುಬ್ಬಳ್ಳಿ:- ಹುಬ್ಬಳ್ಳಿ ಸಿಲಿಂಡರ್​ ಬ್ಲಾಸ್ಟ್ ಕೇಸ್ ಗೆ ಸಂಬಧಪಟ್ಟಂತೆ ಚಿಕಿತ್ಸೆ ಫಲಿಸದೇ ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವನ್ನಪ್ಪಿದ್ದಾರೆ. 16 ವರ್ಷದ ರಾಜು ಮೂಗೇರಿ ಮೃತ ದುರ್ದೈವಿ.

Advertisement

ಡಿಸೆಂಬರ್​ 22ರಂದು ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಸಿಲಿಂಡರ್ ಸ್ಫೋಟಗೊಂಡು 9 ಜನ ಅಯ್ಯಪ್ಪ ಮಾಲಾಧಿಕಾರಿಗಳು ಗಾಯಗೊಂಡಿದ್ದರು. 9 ಜನರನ್ನು ಕಿಮ್ಸ್​ಗೆ ದಾಖಲಿಸಲಾಗಿತ್ತು.

ಇವರಲ್ಲಿ ಇಬ್ಬರು ಗಾಯಾಳುಗಳು ಗುರುವಾರ ಸಾವನ್ನಪ್ಪಿದ್ದರು. ಇಂದು ಮತ್ತೋರ್ವ ಮಾಲಾಧಾರಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ.

ಆರು ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಮಾಲಾಧಾರಿಗಳು ಸಾವನ್ನಪ್ಪಿದ ಹಿನ್ನಲೆಯಲ್ಲಿ ಐವರು ಅಯ್ಯಪ್ಪನ ಮಾಲೆಯನ್ನು ತಗೆದಿದ್ದಾರೆ.

ಅಚ್ಚವ್ವನ ಕಾಲೋನಿಯ ಸನ್ನಿಧಿಯಲ್ಲಿ ಒಟ್ಟು 14 ಜನ ಮಾಲಾಧಾರಿಗಳಿದ್ದರು. ಅದರ ಪೈಕಿ ಸನ್ನಿಧಿಯ ಮೇಲಿನ ಕೋಣೆಯಲ್ಲಿ 9 ಜ‌ನ ಇದ್ದರು, ಕೆಳಗೆ 5 ಜನ ಇದ್ದರು. ಹೀಗಾಗಿ, ಆ ಐದು‌ ಜನರು ಮಾನಸಿಕವಾಗಿ ನೊಂದು ತಾವು ಧರಿಸಿದ್ದ ಮಾಲೆಯನ್ನು ತಗೆದಿದ್ದಾರೆ.


Spread the love

LEAVE A REPLY

Please enter your comment!
Please enter your name here