ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಕಾಂಗ್ರೆಸ್ ಸಮಿತಿಯಲ್ಲಿ ಭಿನ್ನಮತ ಸ್ಪೋಟ್ ಗೊಂಡಿದ್ದು, ಪಕ್ಷ ವಿರೋಧಿ ಚಟುವಟಿಕೆ ಮಾಡೋರ ವಿರುದ್ದ ಕೈ ಶಾಸಕ ಪ್ರಸಾದ್ ಅಬ್ಬಯ್ಯ ಗರಂ ಆದ ಬೆನ್ನಲ್ಲೇ ಪಕ್ಷದ ವಿರೋಧಿಗಳ ನಿದ್ದೆಗೆಡಿಸಿದೆ.
ಒಂದು ಕಡೆ ರಾಜ್ಯ ನಾಯಕರ ನಡುವೆ ಬಂಡಾಯ, ಇತ್ತ ಲೋಕಲ್‌ನಲ್ಲೂ ಭಿನ್ನಮತ ಸ್ಪೋಟಗೊಂಡಿದೆ.
ಕಾಂಗ್ರೆಸ್‌ನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಸ್ಥಳೀಯ ಕೆಲ ಬ್ಲಾಕ್ ಸಮಿತಿಯ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ನಾಯಕರ ವಿರುದ್ದ ಪರೋಕ್ಷವಾಗಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಅಬ್ಬಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ 2024 ಹಾಗೂ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದ ಬೆನ್ನಲ್ಲೇ ಸಾಕಷ್ಟು ಆಕ್ರೋಶಕ್ಕೆ ಸಹ ಕಾರಣವಾಗಿದೆ.
ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಮಾತನಾಡಿದ ನಂತರ ಒಂದು ಕಡೆ ಭಿನ್ನಮತ ಸ್ಪೋಟ್ ಆಗಿದ್ದು, ಇನ್ನೊಂದು ಕಡೆ ಶಾಸಕರ ನಡೆ ಕುರಿತು ಸಹ ಕಾರ್ಯಕರ್ತರಲ್ಲಿ ಒಳಗೊಳಗೆ ಆಕ್ರೋಶಕ್ಕೆ ಕಾರಣವಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ಮಾಡೋರನ್ನ ನಾನು ಬಿಡೋದಿಲ್ಲ ಎಂದು ನೇರವಾಗಿ ಎಚ್ಚರಿಕೆ ನೀಡಿದ ಶಾಸಕ ಅಬ್ಬಯ್ಯ, ಪಕ್ಷದಲ್ಲಿ ಇದ್ದು ದ್ರೋಹ ಮಾಡಿದವರನ್ನು ನಾನು ಕ್ಷಮಿಸೋದಿಲ್ಲ.
ಅವರನ್ನು ನಾನು ಪಕ್ಷದಲ್ಲಿ ಉಳಿಸಿಕೊಳ್ಳುವುದಿಲ್ಲ ಎಂದಿದ್ದು ಮುಂದಿನ ಬೆಳವಣಿಗೆ ಸಹ ಸಾಕಷ್ಟು ಕುತೂಹಲ ಮೂಡಿಸಿದೆ.
ಕೆಲ ಕಾರ್ಪೋರೇಟರ್‌ಗಳು ಭಾರತೀಯ ಜನತಾ ಪಕ್ಷದ ನಾಯಕರ ಸಂಪರ್ಕದಲ್ಲಿರುವ ಹಿನ್ನಲೆಯಲ್ಲಿ ಶಾಸಕ ಅಬ್ಬಯ್ಯ ಗರಂ ಆಗಿದ್ದಾರೆ.
ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ಪಕ್ಷ ವಿರೋಧಿ ಚಟುವಟಿಕೆ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.