HomeKarnataka Newsಹುಬ್ಬಳ್ಳಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು!

ಹುಬ್ಬಳ್ಳಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು!

For Dai;y Updates Join Our whatsapp Group

Spread the love

ಹುಬ್ಬಳ್ಳಿ:- ಕಿಡಿಗೇಡಿಗಳು ದೇವರ ಮೂರ್ತಿಯನ್ನೇ ಭಗ್ನಗೊಳಿಸಿದ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದ ಅಪರ್ಣಾ ಅಪಾರ್ಟ್ಮೆಂಟ್​ನಲ್ಲಿರುವ ದತ್ತಾತ್ರೇಯ ದೇವಸ್ಥಾನದಲ್ಲಿ ಜರುಗಿದೆ.

ಏರಿಯಾದಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ನಿರ್ಮಾಣವಾಗಿದೆ. 15 ವರ್ಷಗಳ ಹಿಂದೆ ಅಪರ್ಣಾ ಅಪಾರ್ಟ್ಮೆಂಟ್​ನಲ್ಲಿನ ಎಲ್ಲರೂ ಸೇರಿ ದತ್ತಾತ್ರೇಯ ದೇವಸ್ಥಾನವನ್ನು ನಿರ್ಮಾಣ ಮಾಡಿ ದತ್ತಾತ್ರೇಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿದಿನವೂ ಕೂಡ ಪೂಜೆಯನ್ನು ಕೂಡ ನೆರವೇರಿಸಲಾಗುತ್ತಿತ್ತು. ನಿನ್ನೆ ರಾತ್ರಿ 2 ಗಂಟೆಯವರೆಗೂ ಇಲ್ಲಿ ಎಲ್ಲರೂ ಸೇರಿ ನವರಾತ್ರಿ ಹಬ್ಬವನ್ನು ಆಚರಣೆ ಮಾಡಿ ಹೋಗಿದ್ದಾರೆ. ಇಂದು ಬೆಳ್ಳಿಗ್ಗೆ ದೇವಸ್ಥಾನದ ಪೂಜಾರಿ ಬಂದಾಗ ದುಷ್ಕ್ರತ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಮಾತನಾಡಿದ ದೇವಸ್ಥಾನದ ಪೂಜಾರಿ, ‘ರಾತ್ರಿ ದೇವಸ್ಥಾನದ ಬಾಗಿಲನ್ನು ಬೀಗ ಹಾಕಿ ಹೋಗಲಾಗಿತ್ತು. ಆದ್ರೆ, ಕಿಡಿಗೇಡಿಗಳು ಬೀಗವನ್ನು ಮೂರಿದಿಲ್ಲ, ಕಬ್ಬಿಣದ ರಾಡ್ ತಗೊಂಡು ಮೂರ್ತಿಯ ಕೈಗೆ ಹೊಡೆದು ನಾಲ್ಕು ಕೈ ಮೂರಿದಿರುವ ಅನುಮಾನ ಎದ್ದು ಕಾಣುತ್ತಿದೆ. ಅದಕ್ಕೆ ಪೂರಕ ಎನ್ನುವಂತೆ ಕಬ್ಬಿಣದ ರಾಡ್ ಕೂಡ ಅಲ್ಲೇ ಬಿದ್ದಿದೆ ಎಂದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿ 24 ಗಂಟೆಯಲ್ಲಿ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!