ಥಿಯೇಟರ್ ನಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ‘ಸು ಫ್ರಮ್ ಸೋ’ ಸಿನಿಮಾ ಒಟಿಟಿಯಲ್ಲಿ ನೋಡಲು ಸಾಕಷ್ಟು ಮಂದಿ ಕಾಯ್ತಿದ್ದರು. ಥಿಯೇಟರ್ ನಲ್ಲಿ ನೋಡಿದವರು ಕೂಡ ಒಟಿಟಿಯಲ್ಲಿ ಮತ್ತೆ ನೋಡ್ಬೇಕು ಎಂದು ಆಸೆ ಪಟ್ಟಿದ್ದರು. ಥಿಯೇಟರ್ ನಲ್ಲಿ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದ್ದ ಸು ಫ್ರಮ್ ಸೋ ಸಿನಿಮಾ ಸೆಪ್ಟೆಂಬರ್ 5ರಂದು ಒಟಿಟಿಗೆ ಬರಲಿದೆ ಎಂದು ವರದಿ ಆಗಿತ್ತು. ಆದರೆ, ಆ ರೀತಿ ಆಗಲೇ ಇಲ್ಲ. ಈ ಬಗ್ಗೆ ಜಿಯೋ ಹಾಟ್ಸ್ಟಾರ್ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಹೀಗಾಗಿ, ಸಿನಿಮಾ ರಿಲೀಸ್ ಮತ್ತಷ್ಟು ವಿಳಂಬ ಆಗಬಹುದು ಎನ್ನಲಾಗುತ್ತಿದೆ.
ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಥಿಯೇಟರ್ ನಲ್ಲಿ ಕೋಟಿ ಕೋಟಿ ಕಲೆಕ್ಷ್ನ ಮಾಡಿದ್ದ ಸಿನಿಮಾದ ಒಟಿಟಿ ಹಾಗೂ ಟಿವಿ ಪ್ರಸಾರ ಹಕ್ಕು ದೊಡ್ಡ ಮಟ್ಟಕ್ಕೆ ಮಾರಾಟ ಆಗಿದೆ. ಇಂದು ಸಿನಿಮಾ ಒಟಿಟಿಗೆ ಬರಲಿದೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದ್ದು ಸಿನಿಮಾ ನೋಡಲು ಕಾಯ್ತಿದ್ದವರಿಗೆ ಭಾರಿ ನಿರಾಸೆಯಾಗಿದೆ.
ಯಾವುದೇ ಸಿನಿಮಾ ಒಟಿಟಿಗೆ ರಿಲೀಸ್ ಆಗುತ್ತದೆ ಎಂದಾದರೆ ಆ ಬಗ್ಗೆ ಒಟಿಟಿ ಪ್ಲಾಟ್ಫಾರ್ಮ್ ಮೊದಲೇ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಮಾಹಿತಿ ನೀಡಲಾಗುತ್ತದೆ. ‘ಸು ಫ್ರಮ್ ಸೋ’ ಸಿನಿಮಾ ವಿಚಾರದಲ್ಲಿ ಜಿಯೋ ಹಾಟ್ಸ್ಟಾರ್ ಆ ಬಗ್ಗೆ ಯಾವುದೇ ಅಪ್ಡೇಟ್ ನೀಡಿಲ್ಲ. ಹೀಗಾಗಿ ಇಂದು ಸಿನಿಮಾ ರಿಲೀಸ್ ಆಗಲ್ಲ. ಜೊತೆಗೆ ಸಿನಿಮಾದ ರಿಲೀಸ್ ದಿನಾಂಕವನ್ನು ಒಟಿಟಿ ಪ್ಲಾಟ್ ಫಾರ್ಮ್ ಘೋಷಣೆ ಮಾಡಿಲ್ಲ.
ಇನ್ನೂ ಕೆಲವು ಮೂಲಗಳ ಪ್ರಕಾರ ಸೆಪ್ಟೆಂಬರ್ 8ರಂದು ‘ಸು ಫ್ರಮ್ ಸೋ’ ಒಟಿಟಿಗೆ ಬರಲಿದೆ ಎಂದು ಹೇಳುತ್ತಿವೆ. ಆದರೆ, ಜಿಯೋ ಹಾಟ್ಸ್ಟಾರ್ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.