ಬೆಂಗಳೂರು: ಭಾರತ ಸೇರಿ ವಿಶ್ವದಲ್ಲಿಯೇ ಚಿನ್ನಕ್ಕೆ ಚಿನ್ನ ಮಾತ್ರವೇ ಸಾಟಿ ಎನ್ನುವಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಚಿನ್ನ ತನ್ನ ಬೆಲೆ ಹೆಚ್ಚಿಸಿಕೊಂಡಿದೆ. ಬೇರೆ ದೇಶಗಳಿಗೆ ಹೋಲಿಸಿದೆರೆ, ಭಾರತೀಯರಿಗೆ ಅದರಲ್ಲೂ ಮಹಿಳೆಯರಿಗೆ ಚಿನ್ನ ಅಂದರೆ ಪ್ರೀತಿ. ಯಾವುದೇ ಸಮಾರಂಭ ಇರಲಿ, ಹಬ್ಬವಿರಲಿ ಅವರು ಮೊದಲು ಕೇಳುವುದೇ ಚಿನ್ನ. ಈ ಹಬ್ಬಕ್ಕಾದ್ರೂ ಒಂದು ಸ್ವಲ್ಪ ಬಂಗಾರ ತೆಗೆದುಕೊಳ್ಳೋಣ ಅನ್ನೋ ಬೇಡಿಕೆ ಇವರ ಬಾಯಲ್ಲಿ ಬರುತ್ತದೆ.
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಒಂದು ಗ್ರಾಂ) ರೂ. 8,720 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 9,513 ರೂನಿಂದ 9,551 ರೂಗೆ ಏರಿದೆ. ವಿದೇಶಗಳಲ್ಲಿ ಕೆಲವೆಡೆ ಅಲ್ಪ ಏರಿಕೆಯಾದರೆ, ಇನ್ನೂ ಕೆಲವೆಡೆ ತುಸು ಇಳಿಕೆಯಾಗಿದೆ. ಇವತ್ತು ಚಿನ್ನದ ಬೆಲೆ ಜೊತೆಗೆ ಬೆಳ್ಳಿ ಬೆಲೆಯೂ ಹೆಚ್ಚಿದೆ. ಗ್ರಾಮ್ಗೆ ಒಂದು ರೂನಷ್ಟು ಬೆಲೆ ಅಧಿಕಗೊಂಡಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,510 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 87,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,800 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 19ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,550 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,510 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,630 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,550 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,510 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 87,550 ರೂ
- ಚೆನ್ನೈ: 87,550 ರೂ
- ಮುಂಬೈ: 87,550 ರೂ
- ದೆಹಲಿ: 87,700 ರೂ
- ಕೋಲ್ಕತಾ: 87,550 ರೂ
- ಕೇರಳ: 87,550 ರೂ
- ಅಹ್ಮದಾಬಾದ್: 87,600 ರೂ
- ಜೈಪುರ್: 87,700 ರೂ
- ಲಕ್ನೋ: 87,700 ರೂ
- ಭುವನೇಶ್ವರ್: 87,550 ರೂ