ವಿದ್ಯೆಗೆ ವಿನಯವೇ ಭೂಷಣ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಿಎ ಪರೀಕ್ಷೆಯು ಎಲ್ಲ ಪರೀಕ್ಷೆಗಳಂತಲ್ಲ. ಅದನ್ನು ಪಾಸಾಗಲು ಕಠಿಣ ಪರಿಶ್ರಮ ಬೇಕು. ಜಕ್ಕಲಿ ಗ್ರಾಮದ ಅಜಯ ದೊಡ್ಡಮೇಟಿ ಸಿಎ ಪಾಸಾಗುವ ಮೂಲಕ ಗದಗ ಜಿಲ್ಲೆಯ ಹೆಸರನ್ನು ಎತ್ತರಕ್ಕೇರಿಸಿದ್ದಾರೆ ಎಂದು ರೋಣ ಪುರಸಭೆಯ ಸದಸ್ಯ ಮಿಥುನ್ ಪಾಟೀಲ ಹೇಳಿದರು.

Advertisement

ಜಕ್ಕಲಿ ಗ್ರಾಮದ ಅಜಯ ಅವರ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಸತತ ಪ್ರಯತ್ನ, ಪರಿಶ್ರಮ ಮತ್ತು ಆತ್ಮವಿಶ್ವಾದಿಂದ ಪರೀಕ್ಷೆಯನ್ನು ಎದುರಿಸಿದರೆ ಮಾತ್ರ ಸಿಎ ಪರೀಕ್ಷೆಯನ್ನು ಪಾಸಾಗಲು ಸಾಧ್ಯವಾಗುತ್ತದೆ. ವಿದ್ಯೆಗೆ ವಿನಯವೇ ಭೂಷಣ ಎನ್ನುವ ಮಾತಿದೆ. ಅಜಯನಲ್ಲಿನ ಈ ಗುಣ ಕಂಡು ಸಂತೋಷವಾಗಿದೆ. ಭಗವಂತ ಖಂಡಿತ ಅವರಿಗೆ ಒಳ್ಳೆಯದನ್ನು ಮಾಡುತ್ತಾನೆ ಎಂದು ಮಿಥುನ್ ಪಾಟೀಲ ಹೇಳಿದರು.

ಕೆಪಿಸಿಸಿ ಯುವ ಘಟಕದ ಕಾರ್ಯದರ್ಶಿ ಅಕ್ಷಯ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಪ್ರತಿಭಾವಂತರಲ್ಲ ಎಂಬ ಮಾತನ್ನು ಸಿಎ ಪಾಸಾಗುವ ಮೂಲಕ ಅಜಯ ಸುಳ್ಳಾಗಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಅತ್ಯಂತ ಕಡಿಮೆ ಸೌಲಭ್ಯಗಳಿರುವ ಸಂದರ್ಭದಲ್ಲಿಯೂ ಸಿಎನಂತಹ ಪರೀಕ್ಷೆಗಳನ್ನು ಪಾಸಾಗಬಹುದೆಂಬುದನ್ನು ಅಜಯ ಸಾಧಿಸಿ ತೋರಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.

ಸಭೆಯನ್ನುದ್ದೇಶಿಸಿ ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ, ಮಲ್ಲಣ್ಣ ಮೇಟಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿದರು. ಹಿರಿಯರಾದ ಶೇಖಣ್ಣ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜಶೇಖರ ಮೇಟಿ, ಶಿವನಾಗಪ್ಪ ದೊಡ್ಡಮೇಟಿ, ಗುರುಲಿಂಗಮೂರ್ತಿ ಮಂಟಯ್ಯನಮಠ, ಚನ್ನಬಸವ ದೊಡ್ಡಮೇಟಿ, ಲಿಂಗಪ್ಪ ದೊಡ್ಡಮೇಟಿ, ಸಂದೇಶ ದೊಡ್ಡಮೇಟಿ, ರಮೇಶ ಪಲ್ಲೇದ, ಶಿವರಾಜ ಮುಗಳಿ, ಗುರಪ್ಪ ರೋಣದ, ಡಾ. ಎ.ವಿ. ನರೇಗಲ್ಲ, ಹರ್ಷವರ್ಧನ ದೊಡ್ಡಮೇಟಿ, ದೊಡ್ಡಮೇಟಿ ಕುಟುಂಬದ ಸದಸ್ಯರಿದ್ದರು.

ಮುತ್ತಣ್ಣ ಮೇಟಿ ಸ್ವಾಗತಿಸಿದರು. ರವಿ ಮುಗಳಿ ನಿರೂಪಿಸಿದರು. ಶಿವರಾಜ ಮುಗಳಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here