ಮಂಡ್ಯ:- ಕೋಳಿ ಫಾರ್ಮ್ ಗೆ ನುಗ್ಗಿ ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ ನೂರಾರು ಕೋಳಿಗಳು ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಜರುಗಿದೆ.
ಬೀದಿ ನಾಯಿಗಳ ಆರ್ಭಟಕ್ಕೆ ಅಲ್ಲಿನ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸಾಗಾಣಿಕ ಘಟಕದಲ್ಲಿ ನೂರಾರು ಕೋಳಿಗಳು ಸಾವನ್ನಪ್ಪಿರುವುದನ್ನು ಕಂಡು ಮಾಲೀಕ ಕಂಗಾಲಾಗಿದ್ದಾನೆ. ಇವು ಗ್ರಾಮದ ಪ್ರಕಾಶ್ ಎಂಬುವವರಿಗೆ ಸೇರಿದ ಕೋಳಿಗಳಾಗಿವೆ. ತಡರಾತ್ರಿ ಕೋಳಿ ಸಾಕಾಣಿಕೆ ಕೊಟ್ಟಿಗೆಗೆ ನುಗ್ಗಿ ಕೋಳಿಗಳ ಮೇಲೆ ಬೀದಿ ನಾಯಿಗಳು ಭೀಕರ ದಾಳಿ ಮಾಡಿವೆ. ಸುಮಾರು 400ಕೋಳಿಗಳ ಮೇಲೆ ದಾಳಿ ನಡೆಸಿದ ಪರಿಣಾಮ ನೂರಾರು ಕೋಳಿಗಳು ಸಾವನ್ನಪ್ಪಿವೆ.
ಘಟನೆಯಿಂದ ಲಕ್ಷಾಂತರ ರೂ ಮೌಲ್ಯದ ಕೋಳಿಗಳ ಕಳೆದುಕೊಂಡು ರೈತ ಕಂಗಾಲಾಗಿದ್ದಾನೆ. ಬೀದಿನಾಯಿಗಳ ಹಾವಳಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕ ಹೊರ ಹಾಕಿದ್ದಾರೆ. ತಕ್ಷಣವೇ ಬೀದಿನಾಯಿಗಳ ಸೆರೆಗೆ ಆಗ್ರಹಿಸಿದ್ದಾರೆ. ಅಲ್ಲದೇ ಸೂಕ್ತ ಪರಿಹಾರಕ್ಕೆ ತಾಲ್ಲೂಕು ಆಡಳಿತಕ್ಕೆ ರೈತ ಮನವಿ ಮಾಡಿದ್ದಾರೆ.


