ಲವರ್ ಜೊತೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಗಂಡ: ಮುಂದೆ ಹೆಂಡ್ತಿ ಮಾಡಿದ್ದೇನು ಗೊತ್ತಾ?

0
Spread the love

ಬೆಳಗಾವಿ:- ಜಿಲ್ಲೆಯ ಚಿಕ್ಕೋಡಿಯಲ್ಲಿ ವ್ಯಕ್ತಿಯೋರ್ವ ಪ್ರೇಯಸಿಯೊಂದಿಗೆ ಲಾಡ್ಜ್​​​ನಲ್ಲಿದ್ದಾಗಲೇ ರೆಡ್​ ಹ್ಯಾಂಡ್​ ಆಗಿ ಪತ್ನಿ ಕೈಗೆ ಸಿಕ್ಕಿಬಿದ್ದಿರುವ ಘಟನೆ ಜರುಗಿದೆ.

Advertisement

ಅವಿನಾಶ್ ಭೋಸಲೆಗೆ ಈಗಾಗಲೇ ಮದುವೆಯಾಗಿದ್ದು. ಆದರೂ ಸಹ ಪ್ರೇಯಸಿಯನ್ನು ಚಿಕ್ಕೋಡಿ ಬಸ್ ನಿಲ್ದಾಣ ಬಳಿ ಇರುವ ಲಾಡ್ಜ್ ಕರೆದೊಯ್ದಿದ್ದ. ಈ ವಿಚಾರ ತಿಳಿಯುತ್ತಿದ್ದಂತೆಯೇ ಪತ್ನಿ ನೇರವಾಗಿ ಲಾಡ್ಜ್ ಗೆ ಬಂದು​ ಪತಿಯನ್ನು ರಸ್ತೆಗೆ ಎಳೆದು ತಂದು ಸಾರ್ವಜನಿಕವಾಗಿ ಉಳ್ಳಾಡಿಸಿ ಚಪ್ಪಲಿಯಿಂದ ಹೊಡೆದಿದ್ದಾಳೆ.

ಈ ಘಟನೆ ಬಸ್ ನಿಲ್ದಾಣ ಹತ್ತಿರ ಇರುವ ಲಾಡ್ಜ್‌ನಲ್ಲಿ ನಡೆದಿದ್ದು, ಅಲ್ಲಿದ್ದವರು ದೃಶ್ಯಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here