ಚಿತ್ರದುರ್ಗ: ತಾಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ಅನೈತಿಕ ಸಂಬಂಧ ಹೊಂದಿದ ಪತ್ನಿ ಓರ್ವಳು ತನ್ನ ಲವರ್ ಜೊತೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಕೊಲೆ ಮಾಡಿರುವ ಘಟನೆ ಜರುಗಿದೆ.
35 ವರ್ಷದ ರಾಘವೇಂದ್ರ ಕೊಲೆಯಾದ ದುರ್ದೈವಿ ಎನ್ನಲಾಗಿದೆ. ಪತ್ನಿ ದಿವ್ಯ, ತನ್ನ ಚಿಕ್ಕಪ್ಪ ಮಾರಣ್ಣ ಹಾಗೂ ಪ್ರೀಯಕರ ರಾಜಣ್ಣ ಜೊತೆ ಸೇರಿ ಗಂಡನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ. ಆರಂಭದಲ್ಲಿ ಅನಾರೋಗ್ಯದ ನಾಟಕವಾಡಿದ್ದ ಪತ್ನಿ ಹಾಗೂ ಪ್ರೀಯಕರನ ಕಳ್ಳಾಟ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಇದೀಗ ಮೂವರು ಆರೋಪಿಗಳನ್ನು ತಳಕು ಪೊಲೀಸರು ಎಡೆಮುರಿ ಕಟ್ಟಿದ್ದಾರೆ. ಸ್ಥಳಕ್ಕೆ ಸಿಪಿಐ ಹನುಮಂತಪ್ಪ ಹಾಗೂ ಪಿಎಸ್ಐ ಲೋಕೇಶ್ ಭೇಟಿ ನೀಡಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



