ಗದಗ:- ಚಿಕನ್ ಊಟ ಮಾಡುವಾಗ ಪತ್ನಿಯನ್ನು ಕೊಲೆ ಮಾಡಿ ಪತಿ ಅಟ್ಟಹಾಸ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಪಿ ಗಂಡನ ವಿಕೃತ ಮನಸ್ಥಿತಿಯ ದೃಶ್ಯ ವೈರಲ್ ಆಗಿದೆ.
ಯಲ್ಲಮ್ಮ ಅಲಿಯಾಸ್ ಸ್ವಾತಿ ಕೊಲೆಯಾದ ಮಹಿಳೆ. ವೃತ್ತಿಯಲ್ಲಿ ಕಂಡಕ್ಟರ್ ಆಗಿರುವ ರಮೇಶ್ ನರಗುಂದ ಕೊಲೆಗೈದ ಪಾಪಿ ಪತಿ. ಎಸ್, ಘಟನೆ ಬಳಿಕ ಗಂಡ ರಮೇಶ್ ನರಗುಂದ ಚಾಕುವನ್ನು ಹಿಡಿದು ರಾಜಾರೋಷವಾಗಿ ಪಬ್ಲಿಕ್ ಗೆ ತೋರಿಸುತ್ತಿರುವ ದೃಶ್ಯ ಕಂಡುಬಂದಿದೆ. ಚಾಕು ಹಿಡಿದು ಹೆಂಡತಿಯನ್ನ ನಾನೇ ಕೊಲೆ ಮಾಡಿರೋದಾಗಿ ಪಬ್ಲಿಕ್ ನಲ್ಲೇ ಹೇಳಿದ್ದಾನೆ. ಈ ಪಾಪಿ ಗಂಡನ ಅಟ್ಟಹಾಸಕ್ಕೆ ಕಾಲೋನಿ ಜನ ಭಯಭೀತಗೊಂಡ ವಾತಾವರಣ ನಿರ್ಮಾಣವಾಗಿತ್ತು.
ಬಿಂಕದಕಟ್ಟಿಯಲ್ಲಿ ನಡೆದಿದ್ದ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ. ಮನೆ ತುಂಬ ಮೈ ತುಂಬ ರಕ್ತಸಿಕ್ತ ದೃಶ್ಯ ನೋಡಿ ಪೊಲೀಸರು ಹಾಗೂ ಗ್ರಾಮಸ್ಥರು ದಂಗಾಗಿದ್ದಾರೆ. ಎಸ್, ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ವಾಸವಿದ್ದ ದಂಪತಿ ಅನ್ಯೋನ್ಯವಾಗಿ ಸಂಸಾರ ಮಾಡುತ್ತಿದ್ದರು. ಆದರೆ ಇತ್ತೀಚಿಗೆ ಹೆಂಡತಿಯ ಮೇಲೆ ಗಂಡನಿಗೆ ಅನುಮಾನದ ವಿಷ ಬಿತ್ತಿತ್ತು. ಒಂದು ದಿನ ಇದೆ ವಿಚಾರಕ್ಕೆ ಜಗಳ ನಡೆದು ಮನೆಯೊಳಗೆ ಪತ್ನಿ ಕೊಂದು ಚಾಕು ಹಿಡಿದುಕೊಂಡು ಮನೆ ಮುಂದೆ ಆಟಾಟೋಪ ಮೆರೆದಿದ್ದಾನೆ. ಹತ್ತಿರ ಬಂದ್ರೆ ನಿಮ್ಮನ್ನು ಚುಚ್ಚುತ್ತೇನೆ ಅಂತ ಬೆದರಿಕೆ ಕೂಡ ಹಾಕುತ್ತಿದ್ದ. ಮೂರು ಮಕ್ಕಳಾದರು ಪತ್ನಿ ಮೇಲೆ ಸಂಶಯ ಮಾಡ್ತಾಯಿದ್ದ.
ಬೀಸುವ ಕಲ್ಲು ಎತ್ತಿ ಹಾಕಿ ನಂತರ ಕಂದ್ಲಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆರೋಪಿ ರಮೇಶ್ ನರಗುಂದ ಅವರು,ಗದಗ ಡಿಪೋ ದಲ್ಲಿ ಕಂಡಕ್ಟರ್ ರಾಗಿ ಸೇವೆ ಸಲ್ಲಿಸಿದ್ದರು ಎನ್ನಲಾಗಿದೆ. ಘಟನೆ ಬಳಿಕ ಎಸ್ಪಿ ರೋಹನ್ ಹಾಗೂ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಘಟನೆ ಹಿನ್ನೆಲೆ:-
ಕುಟುಂಬ ಕಲಹದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಕಂಡಕ್ಟರನೊಬ್ಬ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದ. ಈ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಮನೆಯಲ್ಲಿ ಜರುಗಿತ್ತು. ಬೀಸುವ ಕಲ್ಲು ತಲೆ ಮೇಲೆ ಎತ್ತಿ ಹಾಕಿ ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.
ಸ್ವಾತಿ ಅಲಿಯಾಸ್ ಯಲ್ಲವ್ವ (42) ಭೀಕರವಾಗಿ ಕೊಲೆಗೀಡಾದ ಮಹಿಳೆ. ಗದಗ ಸಾರಿಗೆ ಘಟಕದಲ್ಲಿ ಕಂಡಕ್ಟರ್‌ನಾಗಿದ್ದ ರಮೇಶ್ ಬೂದಪ್ಪ ನರಗುಂದ ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ. ಮನೆ ರಕ್ತಸಿಕ್ತವಾಗಿದ್ದು, ಸ್ಥಳೀಯರು ಈ ದೃಶ್ಯ ನೋಡಿ ದಂಗಾಗಿದ್ದು, ಸುದ್ದಿ ತಿಳಿದು ಎಸ್ಪಿ ರೋಹನ್ ಜಗದೀಶ್ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.