ಬೆಂಗಳೂರು: ಆರು ವರ್ಷದ ಮಗನ ಕಣ್ಣೆದುರೇ ಕತ್ತು ಹಿಸುಕಿ ಪತ್ನಿ ಕೊಲೆಗೈದು ಪತಿ ಸೂಸೈಡ್ ಮಾಡಿಕೊಂಡಿರುವ ಘಟನೆ ಬ್ಯಾಡರಹಳ್ಳಿಯ ಕಾಳಿ ನಗರದ ಮನೆಯಲ್ಲಿ ನಡೆದಿದೆ. ಮಮತ(33) ಪತಿಯಿಂದ ಕೊಲೆಯಾದ ಪತ್ನಿಯಾಗಿದ್ದು,
Advertisement
ಪತಿ ಸುರೇಶ್ (40) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯಾಗಿದ್ದಾರೆ. ಆಟೋ ಡ್ರೈವರ್ ಆಗಿದ್ದ ಸುರೇಶ್ ಸರಿಯಾಗಿ ಕೆಲಸ ಮಾಡದೇ,
ಸಂಸಾರ ನೋಡಿಕೊಳ್ಳದ ಹಿನ್ನೆಲೆ ದಂಪತಿ ನಡುವೆ ಪ್ರತಿನಿತ್ಯ ಗಲಾಟೆಯಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.