ಪತಿ ಕೊಲೆಗೈದು ಪತ್ನಿಯ ಹೈಡ್ರಾಮಾ..ಬಾವಿಯಲ್ಲಿ ಸಿಕ್ಕ ಶವ ಹೇಳ್ತಿದೆ ಐನಾತಿ ಹೆಂಡ್ತಿಯ ಮರ್ಡರ್ ಹಿಸ್ಟ್ರಿ!

0
Spread the love

ಗದಗ:- ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮದಲ್ಲಿ ವಿವಾಹಿತ ವ್ಯಕ್ತಿಯ ಶವ ಮಂಗಳವಾರ ಬಾವಿಯಲ್ಲಿ ಪತ್ತೆಯಾಗಿತ್ತು. ಶವ ನೋಡಿ ಶಾಕ್ ಆದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ಪೊಲೀಸರು ಬಂದು ಪರಿಶೀಲಿಸಿದಾಗ ತಮ್ಮ ಠಾಣೆಯಲ್ಲಿ ದಾಖಲಾಗಿದ್ದ ಮಿಸ್ಸಿಂಗ್ ಕೇಸ್ ವ್ಯಕ್ತಿಯೇ ಎಂದು ಶಂಕಿಸಿದ್ದರು. ಮೃತನ ಕುಟುಂಬದವರು ಬಂದಾಗ ಅದು ಆ ವ್ಯಕ್ತಿಯೇ ಎಂದು ಖಾತರಿ ಆಗಿತ್ತು. ಅಬ್ಬಾ ಈ ವೇಳೆ ಮೃತನ ಹೆಂಡ್ತಿಯ ಹೈಡ್ರಾಮ ನೋಡಿದ್ರೆ ಅಯ್ಯೋ ಪಾಪ ಅನ್ನಿಸ್ತಿತ್ತು. ಇಲ್ಲೇ ಇರೋದು ಮ್ಯಾಟ್ರೂ. ವಿಚಾರಣೆ ಕೈಗೊಂಡ ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಅದು ಏನಪ್ಪಾ ಅಂದ್ರೆ ಐನಾತಿ ಹೆಂಡ್ತಿಯ ಮರ್ಡರ್ ಹಿಸ್ಟರಿ ಪೊಲೀಸ್ ತನಿಖೆಯಲ್ಲಿ ಬಟಾ ಬಯಲಾಗಿದೆ.

Advertisement

ಎಸ್, ವೀಕ್ಷಕರೇ ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ರು, ಆ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡಾ ಇವೆ. ಆದ್ರೆ, ಪ್ರೀತಿಸಿ ಮದುವೆಯಾದ ಗಂಡನನ್ನು ಬಿಟ್ಟು, ಪರ ಯುವಕನ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ಲು ಪತ್ನಿ.. ಯಾವಾಗ ಗಂಡನಿಗೆ ಕಳ್ಳಾಟ ಗೊತ್ತಾಯ್ತೋ, ಇಬ್ಬರ ನಡುವೆ ಗಲಾಟೆ ಆರಂಭವಾಗಿತ್ತು. ಆದ್ರೆ, ಪ್ರೀತಿಸಿ ಮದುವೆಯಾದ ಗಂಡನಿಗೆ ಚಟ್ಟ ಕಟ್ಟಲು, ಪ್ರೀಯಕರನ ಜೊತೆಗೆ ಪ್ಲಾನ್ ಮಾಡಿದ್ಲು ಪತ್ನಿ.. ಪ್ರೀಯಕರ ಜೊತೆಗೆ ಸೇರಿ ಗಂಡನನ್ನು ಕೊಲೆ ಮಾಡಿ, ಈ ಹಂತಕಿ ನಾಪತ್ತೆ ಕಥೆ ಕಟ್ಟಿರೋದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಎಸ್.. ಗದಗ ಜಿಲ್ಲೆ ರೋಣ ಪಟ್ಟಣದ ನಿವಾಸಿಯಾದ ಶಂಕ್ರಪ್ಪ ಕೊಳ್ಳಿ ಮನೆಯಿಂದ ನಾಪತ್ತೆಯಾಗಿದ್ದ. ನನ್ನ ಗಂಡ ನಾಪತ್ತೆಯಾಗಿದ್ದಾನೆ ಎಂದು ಶಂಕ್ರಪ್ಪಳ ಪತ್ನಿ ವಿದ್ಯಾ ರೋಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ಲು.. ಅದೇ ಸಮಯದಲ್ಲಿ ರೋಣ ಹೊರವಲಯದ ಮುಗಳಿ ಗ್ರಾಮದ ಬಾವಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.. ಪೊಲೀಸರಿಗೆ ಅನುಮಾನ ಬಂದು ವಿದ್ಯಾಳಿಗೆ ಮೃತ ದೇಹ ತೋರಿಸಿದ್ದಾರೆ.. ಆಗ ಇದು ನನ್ನ ಗಂಡ ಶಂಕ್ರಪ್ಪನ ಶವ, ಇವನನ್ನು ನಮ್ಮ ಭಾವ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ಲು. ಆದ್ರೆ ರೋಣ ಪೊಲೀಸರು ತನಿಖೆ ಆರಂಭ ಮಾಡಿದ್ರು.. ಶಂಕ್ರಪ್ಪ ಹಾಗೂ ವಿದ್ಯಾ ಹಾಗೂ ಇಬ್ಬರು ಮಕ್ಕಳು ಒಂದೇ ಮನೆಯಲ್ಲಿ ವಾಸ್ ಮಾಡ್ತಾರೆ. ಆ ಮನೆಯಲ್ಲಿ ಬಟ್ಟೆ ಹಾಗೂ ಹಾಸಿಗೆ ಶಂಕ್ರಪ್ಪನ ಶವದ ಮೇಲಿ ಇದ್ದವು. ಇದರ ಜಾಲವನ್ನು ಹಿಡಿದ ಹೋದ ಪೊಲೀಸರಿಗೆ ವಿದ್ಯಾಳ ಮೇಲೆ ಅನುಮಾನ ಬಂದಿದೆ. ಪೊಲೀಸರು ವಿಚಾರಣೆ ಮಾಡಿದಾಗ ಭಯಾನಕ ಸತ್ಯ ಬಹಿರಂಗವಾಗಿದೆ.. ಪ್ರೀತಿಸಿ ಮದುವೆಯಾದ ವಿದ್ಯಾ ಇನ್ನೊಬ್ಬ ಯುವಕನ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ಲು.. ಇದು ಗಂಡನಿಗೆ ಗೊತ್ತಾದ ಮೇಲೆ, ಗಂಡ ಹೆಂಡತಿ ನಡುವೆ ಗಲಾಟೆಯಾಗಿವೆ. ಹೀಗಾಗಿ ಪತಿಯನ್ನು ಹತ್ಯೆ ‌ಮಾಡಬೇಕು ಎಂದು ಪ್ರೀಯಕರ ಶಿವಕುಮಾರ್ ಹಾಗೂ ವಿದ್ಯಾ ಪ್ಲಾನ್ ಮಾಡ್ತಾರೆ. ಮನೆಯಲ್ಲಿ ಕೊಲೆ ಮಾಡಿ, ಬಾವಿಯಲ್ಲಿ ಶವವನ್ನು ಎಸೆದು, ಗಂಡ ನಾಪತ್ತೆಯಾಗಿದ್ದಾನೆ ಎಂದು ಸುಳ್ಳು ಕಥೆ ಸೃಷ್ಟಿ ಮಾಡಿದ್ಲು ವಿದ್ಯಾ.. ನನ್ನ ಗಂಡನ ಸಹೋದರ ಕೊಲೆ ಮಾಡಿದ್ದಾನೆ ಎಂದು ಒಂದು ಕಥೆ ಸೃಷ್ಟಿ ಮಾಡಿದ್ದಾಳೆ..

ಇನ್ನೂ ಆರೇಳು ದಿನಗಳ ಹಿಂದೆ ಶಂಕ್ರಪ್ಪ ಮನೆಗೆ ಬಂದು ಮನೆಯಲ್ಲಿ ಮಲಗಿಕೊಂಡಿದ್ದ.. ಶಂಕ್ರಪ್ಪ ಗಾಡವಾದ ನಿದ್ದೆಗೆ ಜಾರಿ ಮೇಲೆ, ಹಂತಕಿ ವಿದ್ಯಾ ಪ್ರೀಯಕರ ಶಿವಕುಮಾರ್ ಪೋನ್ ಮಾಡಿದ್ದಾಳೆ. ಆಗ ಶಿವಕುಮಾರ್ ಕಾರು ಸಮೇತವಾಗಿ ರಾಡ್ ತೆಗೆದುಕೊಂಡು ಮನೆಗೆ ಬಂದಿದ್ದಾನೆ.. ಆಗ ಶಂಕ್ರಪ್ಪ ತಲೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ.. ವಿದ್ಯಾ ಹಾಗೂ ಪ್ರೀಯಕರ ಶಿವಕುಮಾರ್, ಶಂಕ್ರಪ್ಪನ ಮೃತ ದೇಹವನ್ನು ಮನೆಯಲ್ಲಿನ ಹಾಸಿಗೆ ಹಾಗೂ ಬಟ್ಟೆಯಿಂದ ಕಟ್ಟಿದ್ದಾರೆ.. ಶಿವಕುಮಾರ್ ಒಬ್ಬನೇ ಶಂಕ್ರಪ್ಪನ ಶವನ್ನು ರೋಣ ಪಟ್ಟಣದ ಹೊರವಲಯದ ಮುಗಳಿ ಗ್ರಾಮದ ಬಾವಿಯಲ್ಲಿ ಹಾಕಿದ್ದಾನೆ.. ಈ ಕಡೆ ವಿದ್ಯಾ ಮನೆಯಲ್ಲಿ ರಕ್ತದ ಕಲೆಗಳನ್ನು ಕ್ಲೀನ್ ಮಾಡಿ, ಏನೂ ಆಗಿಲ್ಲ ಎನ್ನುವ ಹಾಗೇ ಇಬ್ಬರ ಮಕ್ಕಳ ಜೊತೆಗೆ ಇದ್ದಾಳೆ. ಒಂದೆರಡು ದಿನವಾದ ಮೇಲೆ, ವಿದ್ಯಾ ಗಂಡ ನಾಪತ್ತೆಯಾಗಿದ್ದು, ನಮ್ಮ ಭಾವನ ಮೇಲೆ ಅನುಮಾನ ಇದೆ ಎಂದು ದೂರು ನೀಡಲು ಹೋಗಿದ್ದಾಳೆ. ಅದ್ರೆ, ಈವಾಗ ರಹಸ್ಯ ಬಯಲಾಗಿದೆ. ಶಂಕ್ರಪ್ಪನನ್ನು ಕಳೆದುಕೊಂಡ ಅವ್ರ ಸಹೋದರಿ ಕಣ್ಣೀರು ಹಾಕುತ್ತಿದ್ದಾಳೆ.

ಒಟ್ಟಾರೆ ಮೋಹಕ್ಕೆ ಬಿದ್ದ ಹೆಂಡ್ತಿ ದೇವರಂತಹ ಗಂಡನನ್ನೇ ಕೊಲೆ ಮಾಡಿದ್ದು ದುರ್ದೈವ ಸಂಗತಿ.


Spread the love

LEAVE A REPLY

Please enter your comment!
Please enter your name here