ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆಗೈದ ಪತಿರಾಯ: ಸಾಕಾಯ್ತಾ ಲವ್ ಮ್ಯಾರೇಜ್!?

0
Spread the love

ಚಿಕ್ಕಮಗಳೂರು:– ತಾಲೂಕಿನ ಕೈಮರಾ ಚೆಕ್ ಪೋಸ್ಟ್ ಬಳಿ ಪತ್ನಿಯನ್ನು ಚಾಕುವಿನಿಂದ ಇರಿದು ಪತಿ ಹತ್ಯೆಗೈದ ಘಟನೆ ಜರುಗಿದೆ. 26 ವರ್ಷದ ಕೀರ್ತಿ ಮೃತ ಮಹಿಳೆ. ಅವಿನಾಶ್ ಪತ್ನಿ ಹತ್ಯೆಗೈದ ಪತಿ. ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳವಾಗಿದೆ. ಇದೇ ಕಾರಣಕ್ಕೆ ಆರೋಪಿ ಮನಸ್ಸೋ ಇಚ್ಛೇ ಚಾಕು ಚುಚ್ಚಿ ಕೊಲೆಗೈದಿದ್ದಾನೆ. ಇಬ್ಬರು 4 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.‌

Advertisement

ಕಳೆದ ವಾರ ಇಬ್ಬರೂ, ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಇಬ್ಬರೂ ಖುಷಿಯಾಗಿಯೇ ಇದ್ದರು. ಆದರೆ, ಅವಿನಾಶ್ ಆಕೆಗೆ ಡಿವೋರ್ಸ್ ನೀಡು ಎಂದು ಕಿರುಕುಳ ನೀಡುತ್ತಿದ್ದ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

ಮೃತ ಕೀರ್ತಿ 4 ತಿಂಗಳ ಗರ್ಭೀಯಾಗಿದ್ದು ಮನೆಯವರಿಗೆ ಗೊತ್ತಿಲ್ಲದಂತೆ ಅಬಾರ್ಷನ್ ಕೂಡ ಮಾಡಿಸಿದ್ದನಂತೆ. ಅಮ್ಮನ ಮನೆಯಲ್ಲಿದ್ದ ಕೀರ್ತಿ ಇಂದು ಬೆಳಗ್ಗೆ ಬಟ್ಟೆ ತೊಳೆದುಕೊಂಡು ಬರುತ್ತೇನೆ ಎಂದು ಹೋದಾಗ, ಆರೋಪಿ ಚಾಕು ಇರಿದಿದ್ದಾನೆ. ಕೂಡಲೇ ಆಕೆಯೇ ಆತನನ್ನ ತಳ್ಳಿ, ರಕ್ತದ ಮಡುವಿನಲ್ಲೇ ರಸ್ತೆಗೆ ಬಂದು ಕೂಗಾಡಿದಾಗ ಮನೆಯವರು, ಅಕ್ಕಪಕ್ಕದವರು ಆಕೆಯನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೀರ್ತಿ ಸಾವನ್ನಪ್ಪಿದ್ದಾಳೆ‌. ಪತ್ನಿಯ ಹತ್ಯೆ ಬಳಿಕ ಆರೋಪಿ ಅವಿನಾಶ್ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here