ಬೆಂಗಳೂರು:- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ತರಲಾಗಿದ್ದ ಸುಮಾರು 6.90 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಈ ಗಾಂಜಾ ಮೌಲ್ಯವು ಸುಮಾರು 2.44 ಕೋಟಿ ರೂ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಗಾಂಜಾವನ್ನು ಸೂಟ್‌ಕೇಸ್‌ನಲ್ಲಿ ಕುಕ್ಕಿಸ್ ಪ್ಯಾಕೆಟ್‌ಗಳಾಗಿ ಮುಚ್ಚಿ ಸಾಗಿಸಲಾಗುತ್ತಿದ್ದು, ಇದೀಗ ಆರೋಪಿಗಳ ಬಂಧನವಾಗಿದೆ.
ಇದೀಗ ಆರೋಪಿ ವಿರುದ್ಧ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



