ಬೆಳಗಾವಿ: ನನಗೆನೂ ಹೊಸದಾಗಿ ಮಂತ್ರಿ ಆಗಬೇಕು ಅನ್ನುವ ಆಸೆ ಇಲ್ಲ ಎಂದು ಶಾಸಕ ಲಕ್ಷ್ಮಣ್ ಸವದಿ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾನು ಹಲವಾರು ಜವಾಬ್ದಾರಿ ಇಲಾಖೆ ನಿಭಾಯಿಸಿದ್ದೇನೆ, ಈಗಾಗಲೆ ರಾಜ್ಯದ ಡಿಸಿಎಂ ಆಗಿದ್ದೇನೆ, ನನಗೆನೂ ಹೊಸದಾಗಿ ಮಂತ್ರಿ ಆಗಬೇಕು ಅನ್ನುವ ಆಸೆ ಇಲ್ಲ, ಮುಂದಿನ ದಿನಗಳಲ್ಲಿ ಒಳ್ಳೆಯ ದಿನಮಾನಗಳು ಇವೆ ಎಂದು ಹೇಳಿದರು.
ಇನ್ನೂ ಮುಡಾ ಪ್ರಕರಣ 20 ವರ್ಷಗಳ ಹಿಂದೆ ಆಗಿರುವಂತದ್ದು, ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಯಾವುದೇ ಬೇಡಿಕೆ ಇಟ್ಟಿಲ್ಲ, ಯಾವುದೇ ಆದೇಶ ಮಾಡಿಲ್ಲ, ತಮ್ಮ ಪತ್ನಿಗೆ ನಿವೇಶನ ಬೇಕಂತ ಎಲ್ಲಿಯೂ ಅರ್ಜಿ ಸಲಿಸಿಲ್ಲ, ಸಿಎಂ ಸಿದರಾಮಯ್ಯ ಅವರ ಪತ್ನಿಗೆ ಸಹೋದರ ಅಕ್ಕನಿಗಾಗಿ ಅರಶಿನ ಕುಂಕುಮ ಎಂಬ ವ್ಯವಸ್ಥೆಯಲ್ಲಿ ದಾನದ ರೂಪದಲ್ಲಿ ನೀಡಿದ್ದಾರೆ ಎಂದು ಶಾಸಕ ಲಕ್ಷ್ಮಣ್ ಸವದಿ ಹೇಳಿದರು.



