ಚಿಕ್ಕಬಳ್ಳಾಪುರ:-ನನಗೂ ಸಚಿವನಾಗಬೇಕೆನ್ನುವ ಆಸೆ ಇದೆ ಎಂದು ಸಚಿವ ಪ್ರದೀಪ್ ಈಶ್ವರ್ ಹೇಳಿದ್ದಾರೆ.
Advertisement
ನವೆಂಬರ್‌ನಲ್ಲಿ ಕ್ರಾಂತಿ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅದೇನು ಕ್ರಾಂತಿ ಆಗುತ್ತೊ ಗೊತ್ತಿಲ್ಲ. ಒಟ್ಟಿನಲ್ಲಿ ಸಿಎಂ, ಡಿಸಿಎಂ, ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದರು.
ಇದೇ ವೇಳೆ ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೂ ಒಂದು ಅವಕಾಶ ಸಿಗಲಿ. ನಾನು ಯಾವುದೋ ಒಂದು ರೂಪದಲ್ಲಿ ರಾಜಭವನಕ್ಕೆ ಹೋಗ್ತೇನೆ. ಬಲಿಜ ಸಮುದಾಯದಲ್ಲಿ ನಾನೊಬ್ಬನೇ ಶಾಸಕ ಎಂದು ಸಚಿವನಾಗುವ ಆಸೆ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾಲಿ ಸಚಿವ ಡಾ ಎಂ ಸಿ ಸುಧಾಕರ್ ರನ್ನ ಮುಂದುವರೆಸಲು ತಕರಾರು ಇಲ್ಲ, ಬಾಗೇಪಲ್ಲಿ ಹಿರಿಯ ಶಾಸಕ ಎಸ್.ಎನ್ ಸುಬ್ಬಾರೆಡ್ಡಿಗೆ ಕೊಟ್ಟರೂ ತಕರಾರಿಲ್ಲ. ನಾನೇನೂ ಸನ್ಯಾಸಿಯಲ್ಲ. ನನಗೂ ಸಚಿವ ಆಗೋ ಆಸೆ ಇದೆ ಎಂದರು.


