ನವದೆಹಲಿ:- ನಾನು ಪಕ್ಷದ ಶಿಸ್ತಿನ ಸಿಪಾಯಿ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಉಪ ಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್‌ಮೇಲ್ ಮಾಡುವ ವ್ಯಕ್ತಿಯಲ್ಲ. ರಾಜೀನಾಮೆ ನೀಡುವುದಿಲ್ಲ. ಮಾಧ್ಯಮಗಳು ಯಾವುದೇ ಗಾಳಿ ಸುದ್ದಿಯನ್ನು ಪ್ರಕಟಿಸಬೇಡಿ ಎಂದರು. ಎಲ್ಲಿಯ ತನಕ ಕಾಂಗ್ರೆಸ್ ಪಕ್ಷ ಯಾವ ಸ್ಥಾನದಲ್ಲಿ ಕೆಲಸ ಮಾಡು ಎನ್ನುತ್ತದೋ ಅಲ್ಲಿಯವರೆಗೆ ನಾನು ಒಬ್ಬ ಶಿಸ್ತಿನ ಸಿಪಾಯಿ ತರ ಕೆಲಸ ಮಾಡುತ್ತೇನೆ. ಹಗಲು ರಾತ್ರಿ ಪಕ್ಷ ಕಟ್ಟಿ ಕೆಲಸ ಮಾಡಿದ್ದೇನೆ. ಪಕ್ಷಕ್ಕೆ ದುಡಿದಿದ್ದೇನೆ, ಮುಂದಕ್ಕೂ ಕಟ್ಟುತ್ತೇನೆ . ಅಧಿಕಾರಕ್ಕೆ ನಮ್ಮ ಪಕ್ಷ ಬರಲಿದೆ ಇದಕ್ಕೆ ಏನು ಮಾಡಬೇಕೋ ಮಾಡುತ್ತೇನೆ. ನಾನೇಕೆ ರಾಜೀನಾಮೆ ಕೊಡುತ್ತೇನೆ . ಆ ಸಂದರ್ಭ ಉದ್ಭವ ಆಗಿಲ್ಲ. ಸುಮ್ಮನೇ ಗಾಳಿ ಸುದ್ದಿ ಮಾಡಬೇಡಿ ಎಂದರು.
ಸಂಪುಟ ವಿಚಾರ ಅದು ಸಿಎಂ ಸಿದ್ದರಾಮಯ್ಯನವರ ಕರ್ತವ್ಯ ಮತ್ತು ಹೈಕಮಾಂಡ್ ಅವರಿಗೆ ಬಿಟ್ಟ ವಿಚಾರ. ನನ್ನನ್ನು ಕರೆದಾಗ ಹೋಗುತ್ತೇನೆ. ನಾನು ಖರ್ಗೆ ಅವರ ಬಳಿ ಈ ವಿಚಾರ ಚರ್ಚೆ ಮಾಡುವುದಿಲ್ಲ. ನಾನು ಸೀದ ಡೇಟ್ ಕೇಳಲು ಹೋಗುತ್ತಿದ್ದೇನೆ ಎಂದರು.



