ರಾಜಕೀಯ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೇನೆ: ಕಣ್ಣೀರು ಹಾಕಿದ ನಿಖಿಲ್ ಕುಮಾರಸ್ವಾಮಿ

0
Spread the love

ರಾಮನಗರ: ಮೂರು ಕ್ಷೇತ್ರಗಳಲ್ಲೂ ಮಳೆ ಬಿಸಿಲು ಎನ್ನದೆ ಪ್ರಚಾರದ ಅಖಾಡದಲ್ಲಿ ನಾಯಕರ ಬೆವರು ಹರಿಸುತ್ತಿದ್ದಾರೆ. ಜಿದ್ದು-ಪ್ರತಿಷ್ಠೆ- ಅಸ್ತಿತ್ವ ಮೂರು ಪಕ್ಷಗಳಿಗೂ ಎಲೆಕ್ಷನ್​ ಗೆಲ್ಲೋದನ್ನ ಅನಿವಾರ್ಯವಾಗಿಸಿದೆ. ಇದೀಗ ಮೂರೂ ಕ್ಷೇತ್ರಗಳಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ತಾಲೂಕಿನ ಕನ್ನಮಂಗಲ ಗ್ರಾಮದ ಪ್ರಚಾರ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿದ್ದಾರೆ. ಹೌದು  ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,

Advertisement

ಈ ಚುನಾವಣೆಯಲ್ಲಿ ನಾನು ಕಣ್ಣೀರು ಹಾಕಬಾರದು ಅಂದುಕೊಂಡಿದ್ದೆ. ಆದರೆ ಸಾಕಷ್ಟು ನೋವುಗಳಿವೆ. ನಾನು ಚುನಾವಣೆಯಲ್ಲೂ ಪೆಟ್ಟು ತಿಂದಿದ್ದೇನೆ. ಜನ ನನ್ನ ಪರವಾಗಿ ಮತ ಹಾಕಿದ್ದಾರೆ. ಆದರೆ ರಾಜಕೀಯ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೇನೆ. ಬಹಳ ನೋವಿನಲ್ಲಿ ಇದ್ದೇನೆ. ಇವತ್ತು ಪಕ್ಷದ ಕಾರ್ಯಕರ್ತರಿಗೆ ಬೆಲೆ ಕೊಡಬೇಕೆಂದು ಈ ಚುನಾವಣೆಯಲ್ಲಿ ನಿಂತಿದ್ದೇನೆ. ದಯವಿಟ್ಟು ಈ ಬಾರಿ ಈ ಯುವಕನನ್ನು ಗೆಲ್ಲಿಸಿ ಎಂದು ಎಂದು ಮನವಿ ಮಾಡಿದರು.


Spread the love

LEAVE A REPLY

Please enter your comment!
Please enter your name here