ಮುಂಬೈ: ನಾನು ಸನ್ಯಾಸಿಯಾಗಿರುವುದರಿಂದ ನಾನು ಜೀವಂತವಾಗಿದ್ದೇನೆ ಎಂದು ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಹೇಳಿದ್ದಾರೆ. ಎನ್‌ಐಎ ವಿಶೇಷ ನ್ಯಾಯಾಲಯ ಆರೋಪಗಳಿಂದ ಖುಲಾಸೆಗೊಳಿಸಿದ ವಿಚಾರವಾಗಿ ಮಾತನಾಡಿದ ಅವರು,
Advertisement
ಈ ಹಿಂದೆ ತನಿಖೆಗಾಗಿ ನನ್ನನ್ನು ಕರೆಸಿ, ಬಂಧಿಸಿ, ಚಿತ್ರಹಿಂಸೆ ನೀಡಲಾಯಿತು. ಇದರಿಂದ ನನ್ನ ಇಡೀ ಜೀವನವೇ ಹಾಳಾಯ್ತು. ನಾನು ಸಾಧ್ವಿ ಜೀವನವನ್ನು ನಡೆಸುತ್ತಿದ್ದೆ. ಆದರೆ ನನ್ನನ್ನು ಆರೋಪಿಯನ್ನಾಗಿ ಮಾಡಲಾಯಿತು.
ಪಿತೂರಿಯಿಂದ ಕೇಸರಿಯನ್ನೂ ದೂಷಿಸಿದರು. ಇಂದು ಕೇಸರಿ, ಹಿಂದುತ್ವ ಗೆದ್ದಿದೆ. ತಪ್ಪಿತಸ್ಥರನ್ನು ದೇವರು ಶಿಕ್ಷಿಸುತ್ತಾನೆ. ನಾನು ಸನ್ಯಾಸಿಯಾಗಿರುವುದರಿಂದ ನಾನು ಜೀವಂತವಾಗಿದ್ದೇನೆ ಎಂದರು.