ಸೃಷ್ಟಿಯ ವೈವಿಧ್ಯತೆ ಅಗಾಧವಾಗಿದೆ

0
'I am Einstein' book launch event
Spread the love

ವಿಜಯಸಾಕ್ಷಿ ಸುದ್ದಿ, ಗದಗ : ವಿಜ್ಞಾನ ಮತ್ತು ಗಣಿತದ ಅನೇಕ ವಿಚಾರಗಳನ್ನು ನಾಟಕಗಳ ಮೂಲಕ ಪ್ರಸ್ತುತಪಡಿಸುವ ಸಾಮಾನ್ಯ ಜನರ ಅರಿವನ್ನು ಹೆಚ್ಚಿಸಬಹುದಾಗಿದೆ. ಸೃಷ್ಟಿಯ ವೈವಿಧ್ಯತೆ ಅಗಾಧವಾದದ್ದು. ಇದರ ಅನ್ವೇಷಣೆಗೆ ಅಲ್ಬರ್ಟ್ ಐನ್‌ಸ್ಟೈಟ್ ತನ್ನ ಜೀವನವನ್ನೇ ಮುಡಿಪಾಗಿಟ್ಟನು.

Advertisement

ಅವನು ಪ್ರತಿಪಾದಿಸಿದ ಸಿದ್ಧಾಂತ ಹಾಗೂ ಜೀವನವನ್ನು ರಂಗದ ಮೂಲಕ ಅಭಿವ್ಯಕ್ತಿಸುವ ಹಿನ್ನೆಲೆಯಲ್ಲಿ ‘ನಾನು ಐನ್‌ಸ್ಟೈನ್’ ಕೃತಿ ಮಹತ್ವದ್ದಾಗಿದೆ ಎಂದು ಹಿರಿಯ ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ನುಡಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿದ್ಯಾದಾನ ಸಮಿತಿ ಗದಗ ಹಾಗೂ ಗುರುವರ್ಯ ಕೆ.ಎಸ್.ಎನ್ ಅಯ್ಯಂಗಾರ ಸ್ಮಾರಕ ಸಮಿತಿ ಸಂಯುಕ್ತ ಆಶ್ರಯದಲ್ಲಿ ಗದುಗಿನ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ.ಬಿ. ಹೂಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ಡಾ. ಪ್ರಕಾಶ ಗರುಡ ವಿರಚಿತ ‘ನಾನು ಐನ್‌ಸ್ಟೈನ್’ ಪುಸ್ತಕ ಲೋಕಾರ್ಪಣೆ ಹಾಗೂ ಏಕವ್ಯಕ್ತಿ ರಂಗಪ್ರದರ್ಶನದಲ್ಲಿ ಮಾತನಾಡಿದರು.

ಸುಮಾರು ಮೂವತ್ತು ವರ್ಷಗಳಿಂದ ರಂಗಭೂಮಿಯ ಜೊತೆಗೆ ಕನ್ನಡದ ನಂಟು ಬೆಳೆಸಿಕೊಂಡು ಬಂದಿರುವ ಪ್ರಕಾಶ ಗರುಡರು ಈ ಕೃತಿಯಲ್ಲಿ ಐನ್‌ಸ್ಟೈನ್ ಸಂಶೋಧನೆಯ ಹರವು, ಸಂಗೀತ ಆಸಕ್ತಿ, ಎಲ್ಲಕ್ಕೂ ಮಿಗಿಲಾಗಿ ವಿಜ್ಞಾನಕ್ಕೆ ಮಾನವೀಯ ಲೇಪನದ ಅಂಶಗಳನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.

ವೇದಿಕೆ ಮೇಲೆ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಶ್ರೀನಿವಾಸ ಹುಯಿಲಗೋಳ, ಡಾ. ಈ.ಬಿ. ಪಾಟೀಲ ಡಾ.ಅನಂತ ಶಿವಪೂರ, ಅಶೋಕ ಖಟವಟೆ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಡಾ.ದತ್ತಪ್ರಸನ್ನ ಪಾಟೀಲ ಉಪಸ್ಥಿತರಿದ್ದರು.

ಪುಸ್ತಕ ಲೋಪಾರ್ಪಣೆ ನಂತರ ಡಾ. ಪ್ರಕಾಶ ಗರುಡ ನಿರ್ದೇಶನದ ‘ನಾನು ಐನ್‌ಸ್ಟೈನ್’ ಏಕವ್ಯಕ್ತಿ ರಂಗ ಪ್ರದರ್ಶನ ನಡೆಯಿತು. ವಿಜ್ಞಾನಿಯ ಜೀವನದ ಎಲ್ಲ ಆಯಾಮಗಳನ್ನು ಎಳೆಎಳೆಯಾಗಿ ಏಕವ್ಯಕ್ತಿ ರಂಗದ ಮೇಲೆ ಪ್ರದರ್ಶಿಸಿ ಕಲಾಸಕ್ತರ ಮನಸೂರೆಗೊಂಡಿತು.

ಕಾರ್ಯಕ್ರಮದಲ್ಲಿ ಪ್ರೊ.ಚಂದ್ರಶೇಖರ ವಸ್ತçದ, ಎಸ್.ಎಸ್. ಕಳಸಾಪುರ, ಡಾ.ಗಂಗೂಬಾಯಿ ಪವಾರ, ಪ್ರೊ. ವಿ.ಎಸ್. ದಲಾಲಿ, ಜಿ.ಎ. ಪಾಟೀಲ, ಸುರೇಶ ಕುಂಬಾರ, ಡಾ. ವಾಣಿ ಶಿವಪೂರ, ಎಚ್.ಬಿ. ಸುಬ್ಬಣ್ಣವರ, ರಾಜೇಶ್ವರಿ ಬಡ್ನಿ, ಎಂ.ಸಿ. ಕಟ್ಟಿಮನಿ, ಸುಶಿಲೇಂದ್ರ ಜೋಶಿ, ರಮೇಶ ಮೇರವಾಡೆ, ಸೀತಾ ಪಾಟೀಲ, ನಡುವಿನಮನಿ ಎಚ್.ಬಿ., ಎಂ.ಎಫ್. ಢಾಲಾಯತ, ಶೈಲಶ್ರೀ ಕಪ್ಪರದ, ಉಮೇಶ ಚಳ್ಳಮರದ, ಎ.ಸಿ. ಹಿರೇಮಠ, ಪದ್ಮಾ ಕಬಾಡಿ, ಗಿರೀಶ ಪಂತರ, ಹರೀಶ ಮೇಕಳಿ, ಶಿವಾನಂದ ಯಾಳಗಿ, ಎಸ್.ಎಲ್. ಹುಯಿಲಗೋಳ, ಶಾಮಸುಂದರ ಕುಲಕರ್ಣಿ, ಕೃಷ್ಣಾಜಿ ನಾಡಿಗೇರ, ವಿ.ಕೆ. ಪುರಾಣಿಕ, ಸೆಲ್ವಾ, ಅಂದಯ್ಯ ಅರವಟಗಿಮಠ, ಎಂ.ಆರ್. ಡೊಳ್ಳಿನ, ಪ್ರಶಾಂತ ಪಾಟೀಲ, ಸುನೀಲ ಕೆರಿ, ಶಕುಂತಲಾ ಸಿಂಧೂರ, ವಿ.ಎಸ್. ದಲಾಲಿ, ಉಮಾ ಕಣವಿ, ಎಸ್.ಎಂ. ಪೂಜಾರ, ಆರ್.ಎಸ್. ಲಮಾಣಿ, ಪಿ.ಬಿ. ಬಂಡಿ, ಷಡಕ್ಷರಿ ಮೆಣಸಿನಕಾಯಿ, ಬಿ.ಬಿ. ಹೊಳಗುಂದಿ, ಮುಕುಂದ ಪೋತ್ನೀಸ್, ಬಸವರಾಜ ಗಣಪ್ಪನವರ, ಡಿ.ಎಚ್. ಮಲ್ಲೇಶ, ಪ್ರೊ. ಶಶಿಕಾಂತ ಕೊರ್ಲಹಳ್ಳಿ, ಎಸ್.ಎಂ. ಕಾತರಕಿ, ಎಸ್.ವಿ. ಬಳ್ಳಿ, ರತ್ನಾ ಪುರಂತರ, ಈರನಗೌಡ ಮಣಕವಾಡ, ಎಸ್.ಎಸ್. ಸೂಳಿಕೇರಿ, ಡಿ.ಎಸ್. ಬಾಪುರಿ, ಎಂ.ಎಚ್. ಸವದತ್ತಿ, ಜಗದೀಶ ಯಾಳಗಿ, ಎಸ್.ಬಿ. ಪಾಟೀಲ, ಪ್ರ.ತೋ. ನಾರಾಯಣಪುರ, ಅಶೋಕ ಸತ್ಯರಡ್ಡಿ, ರಾಜಶೇಖರ ಕರಡಿ, ಬಿ.ಎಸ್. ಹಿಂಡಿ, ವಿದ್ಯಾದಾನ ಸಮಿತಿಯ ಶಿಕ್ಷಕ ಬಳಗದವರು ಉಪಸ್ಥಿತರಿದ್ದರು.

ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಾ.ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು.

ಕೃತಿಯ ಲೇಖಕ ಡಾ. ಪ್ರಕಾಶ ಗರುಡ ಮಾತನಾಡಿ, ವಿಚಾರವಂತರಲ್ಲಿ ಸಂವೇದನಾಶೀಲ ಕಲ್ಪನೆಗಳನ್ನು ಒಡಮೂಡಿಸುವ ಈ ಏಕಪಾತ್ರ ರೂಪಕ ಈಗಾಗಲೇ ರಂಗಭೂಮಿಯ ಮೇಲೆ ಯಶಸ್ವಿ ಪ್ರಯೋಗಗಳನ್ನು ಕಂಡಿದೆ. ಇಂದು ಪುಸ್ತಕ ಮತ್ತು ರಂಗಪ್ರದರ್ಶನ ಏಕಕಾಲಕ್ಕೆ ನಡೆಯುತ್ತಿರುವ ಸಂತೋಷ ತಂದಿದೆ ಎಂದರು.


Spread the love

LEAVE A REPLY

Please enter your comment!
Please enter your name here