ಗದಗ:- ನಾನು ಹಾಗೂ ಜನಾರ್ದನ ರೆಡ್ಡಿ ಒಂದಾಗ್ತೀವಿ. ಇದರಲ್ಲಿ ಸಂಶಯವಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಈ ಸಂಬಂಧ ಗದಗದಲ್ಲಿ ಮಾತನಾಡಿದ ಅವರು, ನಾನು ಜನಾರ್ದನ ರೆಡ್ಡಿ ಒಂದಾಗಿಯೇ ಆಗ್ತೀವಿ. ನನ್ನ ಹಾಗೂ ಜನಾರ್ದನ ರೆಡ್ಡಿ ನಡುವೆ ಯಾವುದೇ ಗೊಂದಲವೇ ಇಲ್ಲ. ನಾನು ಯಾವತ್ತೂ ಮುರುಕೊಂಡು ಬಿಳೋದು ಇದ್ರೆ ಮುರಕುಕೊಂಡು ಬಿಳೋನು. ಕೂಡೋದಿದ್ರಿ ಕೂಡಿ ಬಾಳುವವರು. ಆವತ್ತಿನ ಪರಿಸ್ಥಿತಿಯಲ್ಲಿ ಜನಾರ್ದನ ರೆಡ್ಡಿ ಒಂದು ಮಾತು ಆಡಿದ್ರು.
ನಾನೊಂದು ಮಾತನಾಡಿದ್ದೇ ಅಷ್ಟೇ ಬಿಟ್ರೆ ಏನೂ ಇಲ್ಲ. ಹೊರಗಡೆ ಬಂದು ಬೇರೆ ಏನೂ ಮಾತನಾಡಿಲ್ಲ. ಯಾವುದೇ ಗೊಂದಲ ಮಾಡಿಕೊಂಡಿಲ್ಲ. ಸಂಧಾನ ಮಾಡುವ ಪರಿಸ್ಥಿತಿ ಎಲ್ಲಿ ಬಂದಿದೆ. ನಮ್ಮದ್ಯಾವ್ದೂ ಸ್ವಾರ್ಥ ಇಲ್ಲ. ಪಾರ್ಟಿ ಹಿತದೃಷ್ಟಿಯಿಂದ ರಾಜಕೀಯವಾಗಿ ಒಂದು ಆಗಿಯೇ ಆಗ್ತೀವಿ. ನಾವು ಒಂದು ಇಲ್ಲಾಂದ್ರೆ ಒಂದು ಮಾಡಬೇಕು. ನಾವು ಯಾವತ್ತಿದ್ರೂ ಪಾರ್ಟಿ ನೋಡ್ತೀವಿ. ನಾನು ಇರಲಿ, ರೆಡ್ಡಿ ಇರಲಿ ಬೇರೆ ಯಾರೇ ಇದ್ರೂ ಪಾರ್ಟಿ ಹಿತದೃಷ್ಟಿಯಿಂದ ಒಂದಾಗಬೇಕು. ಎಲ್ಲರೂ ಒಂದಾದ್ರೆ ಜನಾರ್ದನ ರೆಡ್ಡಿ ರಾಮುಲು ಬೇರೆ ಅಲ್ಲ ಅವ್ರು ಒಂದಾಗ್ತಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ.
ಅಂದಿನ ಪರಿಸ್ಥಿತಿಯಲ್ಲಿ ಒಬ್ಬರಿಗೊಬ್ಬರು ಬಾಯಿ ಮಾಡಿಕೊಂಡಿದ್ದು ನಿಜ. ನಂತ್ರ ಯಾವತ್ತು ಬಾಯಿ ಮಾಡಿಕೊಂಡಿಲ್ಲ.ಆವತ್ತಿನ ದಿನ ನಾನು ಮಾತನಾಡಿದ್ದು ತಪ್ಪು, ಅವ್ರು ಮಾತನಾಡಿದ್ದು ತಪ್ಪು. ಅವತ್ತಿನ ಬೆಳವಣಿಗೆ ಎಲ್ಲವೂ ಮರೆತು ಹೋಗಿದ್ದೇವೆ. ಮತ್ತೆ ಅಧಿಕಾರಕ್ಕೆ ಬರಬೇಕಾದ್ರೆ ಮತ್ತೆ ನಾವೆಲ್ಲಾ ಒಂದಾಗಬೇಕಾಗಿದೆ. ನಮ್ಮ ಪರ್ಸನಲ್ ನೂರಾರು ಇರಲಿ. ಅದು ಮುಖ್ಯವಲ್ಲ. ಪಾರ್ಟಿ ಬೆಳೆಸಬೇಕು. ಜನ್ರಲ್ಲಿ ಭರವಸೆ ತುಂಬಬೇಕು. ಅಂದ್ರೆ ಎಲ್ಲರೂ ಒಂದಾಗಬೇಕು. ರೆಡ್ಡಿ ರಾಮುಲು ಮಾತ್ರವಲ್ಲ ರಾಜ್ಯದಲ್ಲಿ ಎಲ್ಲರನ್ನೂ ಒಂದು ಮಾಡ್ತೀವಿ. 100% ಎಲ್ಲರೂ ಒಂದಾಗ್ತೀವಿ. ಒಂದಾಗಿ ಚುನಾವಣೆ ಎದುರಿಸ್ತೀವಿ ಎಂದು ರಾಮುಲು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದಿಂದ ಗೊಂದಲ ಆಡಳಿತ:
ಇನ್ನೂ ರಾಜ್ಯದ ಕಾಂಗ್ರೆಸ್ ಸರ್ಕಾರ ಗೊಂದಲದ ಆಡಳಿತ ನಡೆಸುತ್ತಿದೆ. ರಾಜ್ಯದ ಮುಖ್ಯಮಂತ್ರಿ ಯಾರು ಅಂತಾ ಪ್ರಶ್ನೆ ಎದುರಾಗಿದೆ. ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಾ ಅಥವಾ ಸುರ್ಜೇವಾಲಾ ಅಂತಾ ಸ್ಪಷ್ಟೀಕರಣ ಕೊಡಬೇಕು. ದೆಹಲಿಯಿಂದ ಬಂದ ಉಸ್ತುವಾರಿಗಳು ಶಾಸಕರನ್ನು ಕರೆದು ಸಭೆ ಮಾಡೋದು, ಸಚಿವರನ್ನು ಕರೆದು ಮೀಟಿಂಗ್ ಮಾಡೋದು ಮಾಡ್ತಾಯಿದ್ದಾರೆ.
ಸಿಎಂಗೆ ಯಾವುದೇ ಕಿಮ್ಮತ್ತು ಇಲ್ಲದ ಪರಿಸ್ಥಿತಿ ಸುರ್ಜೇವಾಲಾ ಮಾಡ್ತಾಯಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ವಿಷಯವಾಗಿ ಶ್ರೀ ರಾಮುಲು ಬಾಂಬ್ ಹಾಕಿದ್ದಾರೆ. ಸಿಎಂ ಬದಲಾವಣೆಗೆ ಪ್ರಯತ್ನ ನಡೆಸುತ್ತಿದ್ದಾರಾ..?ಶಾಸಕರು ಹಾಗೂ ಸಚಿವರನ್ನು ಕರೆದು ಗೌಪ್ಯವಾಗಿ ಮಾತನಾಡುತ್ತಿದ್ದಾರಾ..?ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಸಿಎಂ ರೀತಿಯಲ್ಲಿ ವರ್ತನೆ ಮಾಡ್ತಾಯಿದ್ದಾರೆ. ಈ ಸರ್ಕಾರ ಕೋಮಾ ಸ್ಥಿತಿಯಲ್ಲಿದೆ, ಆಕ್ಸಿಜನ್ ತೆಗೆದ್ರೆ ಈ ಸರ್ಕಾರ ಬಿದ್ದು ಹೋಗುತ್ತೆ. ರಾಜ್ಯದಲ್ಲಿ ಮಂತ್ರಿಗಳು ಅನುದಾನ ತಂದು ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಶಾಸಕರು, ಮಂತ್ರಿಗಳು ಅಸಮಾಧಾನದಿಂದ ಇದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ಮಾಡಿದ್ದಾರೆ.