ಕೋಲಾರ:– ಒಂದಲ್ಲ, ಹತ್ತಲ್ಲ ಬಿಜೆಪಿ ವಿರುದ್ಧ ನೂರು ಎಫ್‌ಐಆರ್ ದಾಖಲು ಮಾಡಿದರೂ ನಾವು ಹೆದರಲ್ಲ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು,ಆರ್‌ಎಸ್‌ಎಸ್‌ನಲ್ಲಿ 42 ಸಂಘಟನೆಗಳಿವೆ. ಅದರಲ್ಲಿ ಭಾರತೀಯ ಜನತಾ ಪಾರ್ಟಿ ಒಂದು. ದೇಶ ಮತ್ತು ಧರ್ಮದ ರಕ್ಷಣೆಗೆ ಆರ್‌ಎಸ್‌ಎಸ್ ಹುಟ್ಟಿರೋದು, ದೇಶಕ್ಕೋಸ್ಕರ ಪ್ರಾಣ ಕೊಡಲು ಸಿದ್ಧ. ವೋಟ್ ಬ್ಯಾಂಕ್‌ಗೋಸ್ಕರ ಸಿದ್ದರಾಮಯ್ಯ ಒಂದು ಸಮುದಾಯವನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಒಂದಲ್ಲ ನೂರು ಎಫ್‌ಐಆರ್ ಹಾಕಿದರು ಹೆದುರುವುದಿಲ್ಲ, ಭಯ ಅನ್ನೋದು ನಮ್ಮಲ್ಲಿ ಇಲ್ಲ. ಸಿಟಿ ರವಿ, ವಿಕ್ರಂ ಹೆಗ್ಡೆ, ರಾಜೀವ್ ಮೇಲೆ ಹಾಕಿರುವ ಪ್ರಕರಣ ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ, ಸುಳ್ಳು ಗ್ಯಾರೆಂಟಿಗಳನ್ನು ಹೇಳಿ ಜನರನ್ನ ದಾರಿ ತಪ್ಪಿಸಿದೆ. ಮುಂದಿನ ದಿನಗಳಲ್ಲಿ ಜನ ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.



