ದರ್ಶನ್ ಅಣ್ಣನನ್ನು ನಾನು ಅಣ್ಣ ಅಂತ ಹೇಳಲು ಹೆದರಿಕೆಯಿಲ್ಲ ಹಿಂಜರಿಯೋದಿಲ್ಲ: ನಟ ಧನ್ವೀರ್

0
Spread the love

ಬೆಂಗಳೂರು: ಇಂದು ನಟ ಧನ್ವೀರ್ ಪರಪ್ಪನ ಅಗ್ರಹಾರಕ್ಕೆ ತೆರಳಿ ದರ್ಶನ್‌ರನ್ನು ಭೇಟಿಯಾಗಿದ್ದಾರೆ. ಬಳಿಕ ಮಾತನಾಡಿದ ಅವರು, ದರ್ಶನ್ ನನಗೆ ಯಾವಾಗಲೂ ಅಣ್ಣ ಅಂತಾನೇ ಹೇಳ್ತೀನಿ. ಅವರ ಅಭಿಮಾನಿಗಳು ಯಾರು ಆತಂಕಕ್ಕೆ ಒಳಗಾಗಬಾರದು. ನಾನು ಎಲ್ಲಿಯೂ ಕೂಡ ಮಾತನಾಡುತ್ತಿಲ್ಲ ಅಂತ ಎಲ್ಲರೂ ಹೇಳ್ತಿದ್ದರು. ಆದರೆ ಇದು ಮಾತನಾಡುವ ಸಂದರ್ಭವಲ್ಲ. ತನಿಖೆ ನಡೆಯುತ್ತಿರುವ ವೇಳೆ,

Advertisement

ನಾವು ಮಾತನಾಡುವುದರಿಂದ ಎಲ್ಲವೂ ಸರಿ ಹೋಗೋದಿಲ್ಲ ಅಂತ ಗೊತ್ತಿತ್ತು ಎಂದು ಧನ್ವೀರ್ ಗೌಡ ಮಾತನಾಡಿದ್ದಾರೆ.ಎಂದಿಗೂ ಕೂಡ ದರ್ಶನ್ ಅಣ್ಣನನ್ನು ನಾನು ಅಣ್ಣ ಅಂತ ಹೇಳಲು ಹೆದರಿಕೆಯಿಲ್ಲ ಹಿಂಜರಿಯೋದಿಲ್ಲ ಎಂದಿದ್ದಾರೆ. ಚಾಮುಂಡೇಶ್ವರಿ ಆಶೀರ್ವಾದದಿಂದ ಎಲ್ಲವೂ ಒಳ್ಳೆಯದಾಗಲಿದೆ ಎಂದು ಮಾತನಾಡಿದ್ದಾರೆ. ಕಾನೂನಿಗಿಂತ ಯಾರು ದೊಡ್ಡವರಿಲ್ಲ. ತಪ್ಪಾಗಿದ್ರೆ ಶಿಕ್ಷೆ ಆಗೇ ಆಗುತ್ತದೆ ಎಂದು ಪ್ರಕರಣದ ಬಗ್ಗೆ ಧನ್ವೀರ್ ಮಾತನಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here