ಕಲಬುರಗಿ:- ಕಾಂಗ್ರೆಸ್ ಪಕ್ಷಕ್ಕೆ ಯತ್ನಾಳ್ ಕರೆತರುವಷ್ಟು ನಾನು ಸಾಮರ್ಥ್ಯ ಹೊಂದಿಲ್ಲ ಎಂದು ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡಿದ್ದಾರೆ. ಅವರನ್ನು ಉಚ್ಚಾಟನೆ ಮಾಡಿರುವುದು ದುರಾದೃಷ್ಟಕರ.
ರಾಜಕಾರಣದಲ್ಲಿ ಉಚ್ಚಾಟನೆಯಂತಹ ಘಟನೆಗಳು ನಡೆಯಬಾರದು. ಕಾಂಗ್ರೆಸ್ ಪಕ್ಷಕ್ಕೆ ಯತ್ನಾಳ್ ಅವರನ್ನು ಕರೆತರಲು ತಾವು ಸಾಮರ್ಥ್ಯ ಹೊಂದಿಲ್ಲ. ಅದಕ್ಕಾಗಿ ಬೇರೆ ವ್ಯಕ್ತಿಗಳು ಇದ್ದಾರೆ ಎಂದರು. ಹಾಲಿನ ದರ ಏರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಲಿನ ದರ ಏರಿಕೆಯಾದರೂ ಹೆಚ್ಚುವರಿ 4 ರೂ. ನೇರವಾಗಿ ರೈತರಿಗೆ ಹೋಗುತ್ತದೆ. ಈ ಹೆಚ್ಚಳವನ್ನು ಕರ್ನಾಟಕ ಹಾಲು ಮಹಾಮಂಡಳಿ ಪಡೆದುಕೊಳ್ಳದೇ, ರೈತರಿಗೆ ಲಾಭವಾಗುವಂತೆ ಮಾಡಲಾಗಿದೆ. ಇತರ ರಾಜ್ಯಗಳ ಹಾಲಿನ ದರಗಳೊಂದಿಗೆ ಹೋಲಿಸಿದರೆ, ಉದಾಹರಣೆಗೆ ಗುಜರಾತ್‌ನಲ್ಲಿ, ನಮ್ಮ ರಾಜ್ಯದ ದರಗಳು ಸಮಾನವಾಗಿವೆ ಎಂದರು.